ADVERTISEMENT

ಮಳೆ ಹಾನಿ: ಮೇಯರ್‌ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 1 ಮೇ 2019, 20:06 IST
Last Updated 1 ಮೇ 2019, 20:06 IST
ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ಅಧಿಕಾರಿಗಳೊಂದಿಗೆ ಕಾವೇರಿ ಕೆಳಸೇತುವೆಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ಅಧಿಕಾರಿಗಳೊಂದಿಗೆ ಕಾವೇರಿ ಕೆಳಸೇತುವೆಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.   

ಬೆಂಗಳೂರು:‘ಫೋನಿ’ ಚಂಡಮಾರುತ ಹಾಗೂ ಮೇಲ್ಮೈ ಸುಳಿಗಾಳಿ ಪರಿಣಾಮ ಮಂಗಳವಾರ ಸುರಿದ ಗಾಳಿ ಸಹಿತ ಭಾರಿ ಮಳೆಯಿಂದ ಹಾನಿಗೊಳಗಾಗಿದ್ದ ಪ್ರದೇಶಗಳಿಗೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗರುಡಾಚಾರ್‌ಪಾಳ್ಯದಲ್ಲಿ ಕಾಂಪೌಂಡ್ ಕುಸಿದು ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಮೃತಪಟ್ಟಿದ್ದ,ಪ್ರದೇಶಕ್ಕೆ ಭೇಟಿ ನೀಡಿದರು. ಕಟ್ಟಡದಮಾಲಿಕರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬಳಿಕ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲ್ಪಟ್ಟಿರುವ, ಕೆ.ಆರ್.ಪುರ, ಸಿಲ್ಕ್ ಬೋರ್ಡ್‌ ಜಂಕ್ಷನ್, ಮಡಿವಾಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು.ತುರ್ತಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅನಾಹುತ ಆಗದಂತೆ ಎಚ್ಚರವಹಿಸುವಂತೆ ಸೂಚಿಸಿದರು.

ADVERTISEMENT

ನಗರದ ಕಾವೇರಿ ಕೆಳಸೇತುವೆ, ಮಡಿವಾಳ ಕೆಳಸೇತುವೆ ಹಾಗೂ ಲೀಮೆರಿಡಿಯನ್ ಕೆಳಸೇತುವೆಗಳಿಗೂ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ತಾತ್ಕಾಲಿಕ ಕಾಮಗಾರಿಯನ್ನು ವೀಕ್ಷಿಸಿದರು.

ಎಚ್ಚೆತ್ತ ಬೆಸ್ಕಾಂ: ಕಳೆದ ತಿಂಗಳು 18ರಂದು ಸುರಿದ ಮಳೆಗೆನಗರದ ವಿವಿಧ ಭಾಗಗಳಲ್ಲಿ ಕಂಬಗಳು ನೆಲಕ್ಕೆ ಉರುಳಿದ್ದವು. ಮಂಗಳವಾರವೂ ಸಹಾಯವಾಣಿಗೆ 100ಕ್ಕೂ ಹೆಚ್ಚು ಕರೆಗಳು ಬಂದ ಕಾರಣ ಬೆಸ್ಕಾಂ ಎಚ್ಚೆತ್ತುಕೊಂಡಿದ್ದು, ಹಲವುಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ.

ವಿದ್ಯುತ್‌ ಕಂಬಗಳಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದ್ದ 2,153 ಮರಗಳನ್ನು ಟ್ರಿಮ್ಮಿಂಗ್‌ ಮಾಡಿದ್ದು, ಬಾಗಿದ್ದ 448 ಕಂಬಗಳನ್ನು ಸದೃಢವಾಗಿನಿಲ್ಲಿಸಲಾಗಿದೆ. 363ಟ್ರಾನ್ಸ್‌ಫಾರ್ಮರ್‌ಗಳನ್ನು ದುರಸ್ತಿಪಡಿಸಿದೆ.

ಮಳೆ ಸಾಧ್ಯತೆ ಕಡಿಮೆ
‘ಫೋನಿ ಆರ್ಭಟ ಈಗ ತಗ್ಗಿದ್ದು, ನಗರದಲ್ಲಿ ಆ ಚಂಡಮಾರುತದಿಂದ ಇನ್ನು ಮಳೆ ಸಾಧ್ಯತೆ ಇಲ್ಲ’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.