ADVERTISEMENT

ಬೆಂಗಳೂರು ನಗರದ ಹಲವೆಡೆ ಮಳೆ

​ಪ್ರಜಾವಾಣಿ ವಾರ್ತೆ
Published 13 ಮೇ 2021, 21:17 IST
Last Updated 13 ಮೇ 2021, 21:17 IST
ನಗರದ ಶ್ರೀನಗರದಲ್ಲಿ ವ್ಯಕ್ತಿಯೊಬ್ಬರು ಮಳೆಯಲ್ಲಿ ಕೊಡೆ ಇಡಿದು ಸಾಗಿದರು–ಪ್ರಜಾವಾಣಿ ಚಿತ್ರ : ಅನೂಪ್ ರಾಘ.ಟಿ.
ನಗರದ ಶ್ರೀನಗರದಲ್ಲಿ ವ್ಯಕ್ತಿಯೊಬ್ಬರು ಮಳೆಯಲ್ಲಿ ಕೊಡೆ ಇಡಿದು ಸಾಗಿದರು–ಪ್ರಜಾವಾಣಿ ಚಿತ್ರ : ಅನೂಪ್ ರಾಘ.ಟಿ.   

ಬೆಂಗಳೂರು: ನಗರದಲ್ಲಿ ಗುರುವಾರ ಮೋಡ ಕವಿದ ವಾತಾವರಣ ಕಂಡುಬಂದು, ಸಂಜೆ ವೇಳೆ ಹಲವೆಡೆ ಮಳೆ ಸುರಿಯಿತು.

ಬುಧವಾರವೂ ನಗರದ ಹಲವೆಡೆ ಜೋರು ಮಳೆಯಾಗಿತ್ತು. ಗುರುವಾರ ಬೆಳಿಗ್ಗೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು.

ಹೆಣ್ಣೂರು, ಕೆ. ನಾರಾಯಣಪುರ, ಥಣಿಸಂದ್ರ, ಮಹಾಲಕ್ಷ್ಮಿ ಲೇಔಟ್, ಬನಶಂಕರಿ, ಪೀಣ್ಯ, ದಾಸರಹಳ್ಳಿ, ಜಾಲಹಳ್ಳಿ ಹಾಗೂ ಹಲವೆಡೆ ಮಳೆ ಆಯಿತು. ಸಿಡಿಲು–ಗುಡುಗು ಸಹ ಇತ್ತು.

ADVERTISEMENT

‘ಚಂಡಮಾರು ಪರಿಣಾಮದಿಂದಾಗಿ ರಾಜ್ಯದ ಹಲವೆಡೆ ಮತ್ತಷ್ಟು ದಿನ ಮಳೆಯಾಗುವ ಸಾಧ್ಯತೆ ಇದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ, ‘ನಗರದಲ್ಲಿ ಬುಧವಾರ ಜೋರು ಮಳೆ ಇತ್ತು. ಗುರುವಾರ ಮಳೆ ಪ್ರಮಾಣ ಕಡಿಮೆ ಇತ್ತು. ಹೀಗಾಗಿ, ಯಾವುದೇ ದೂರುಗಳು ಬಂದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.