ADVERTISEMENT

ಬೆಂಗಳೂರು: ನಗರದ ಹಲವೆಡೆ ಮಳೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 23:50 IST
Last Updated 30 ಜುಲೈ 2024, 23:50 IST
ನಗರದ ಶೇಷಾದ್ರಿಪುರದಲ್ಲಿ ತುಂತುರು ಮಳೆಯಲ್ಲಿ ಬಸ್‌ಗಾಗಿ ಕೊಡೆ ಹಿಡಿದು ಕಾದ ಜನ
ಪ್ರಜಾವಾಣಿ ಚಿತ್ರ / ಎಂ.ಎಸ್.ಮಂಜುನಾಥ್
ನಗರದ ಶೇಷಾದ್ರಿಪುರದಲ್ಲಿ ತುಂತುರು ಮಳೆಯಲ್ಲಿ ಬಸ್‌ಗಾಗಿ ಕೊಡೆ ಹಿಡಿದು ಕಾದ ಜನ ಪ್ರಜಾವಾಣಿ ಚಿತ್ರ / ಎಂ.ಎಸ್.ಮಂಜುನಾಥ್   

ಬೆಂಗಳೂರು: ನಗರದಲ್ಲಿ ಹಲವು ಪ್ರದೇಶಗಳಲ್ಲಿ ಮಂಗಳವಾರ ಉತ್ತಮವಾಗಿ ಮಳೆಯಾಗಿದೆ.

ಮಂಗಳವಾರ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಅಲ್ಲಲ್ಲಿ ತುಂತುರು ಮಳೆಯಾಗುತ್ತಿತ್ತು. ಮಧ್ಯಾಹ್ನದ ನಂತರ ರಾತ್ರಿಯವರೆಗೂ ಬಹುತೇಕ ಪ್ರದೇಶಗಳಲ್ಲಿ ಸುಮಾರು 5 ಮಿ.ಮೀ.ನಷ್ಟು ಮಳೆಯಾಗಿದೆ.

ಹೇರೋಹಳ್ಳಿ, ಚೌಡೇಶ್ವರಿ ವಾರ್ಡ್‌, ಯಲಹಂಕ, ಬಾಗಲಗುಂಟೆ, ಯಶವಂತಪುರ, ಹೆಬ್ಬಾಳ, ಮಾರುತಿ ಮಂದಿರ, ಹಂಪಿನಗರ, ಕೆಂಗೇರಿ, ನಾಯಂಡಹಳ್ಳಿ, ಆರ್‌.ಆರ್. ನಗರ, ವನ್ನಾರ್‌ಪೇಟೆ, ಬಿಟಿಎಂ ಲೇಔಟ್‌, ಮಾರತ್‌ಹಳ್ಳಿ, ಮಹದೇವಪುರ, ವಿಜ್ಞಾನನಗರ, ಹೂಡಿ, ಪುಲಕೇಶಿನಗರ, ಸಂಪಂಗಿರಾಮನಗರ, ಕಾಟನ್‌ಪೇಟೆ, ರಾಜಮಹಲ್‌ ಗುಟ್ಟಹಳ್ಳಿ ಸುತ್ತಮುತ್ತಲ ಪ್ರದೇಶ ಸೇರಿದಂತೆ ವಿವಿಧೆಡೆ ಉತ್ತಮ ಮಳೆ ಸುರಿಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.