ADVERTISEMENT

ಯಲಹಂಕ | ಭಾರಿ ಮಳೆ: ಉರುಳಿದ ಮರಗಳು

​ಪ್ರಜಾವಾಣಿ ವಾರ್ತೆ
Published 26 ಮೇ 2020, 19:32 IST
Last Updated 26 ಮೇ 2020, 19:32 IST
ವೆಂಕಟಾಲ ಗ್ರಾಮದಲ್ಲಿ ಬೃಹತ್ ಮರವೊಂದು ಮನೆಯ ಮೇಲೆ ಬಿದ್ದಿತು
ವೆಂಕಟಾಲ ಗ್ರಾಮದಲ್ಲಿ ಬೃಹತ್ ಮರವೊಂದು ಮನೆಯ ಮೇಲೆ ಬಿದ್ದಿತು   

ಯಲಹಂಕ: ತಾಲ್ಲೂಕಿನಲ್ಲಿ ಮಂಗಳವಾರ ಸಂಜೆ ಸುರಿದ ಭಾರಿ ಮಳೆಯಿಂದಯಲಹಂಕ-ಜಕ್ಕೂರು ಮುಖ್ಯರಸ್ತೆಯ ಸುರಭಿ ಲೇಔಟ್ ಹಾಗೂ ವೆಂಕಟಾಲ ಗ್ರಾಮದಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಉರುಳಿದವು.

ಸುರಭಿ ಲೇಔಟ್ ಬಳಿ ಮರವೊಂದು 11 ಕೆವಿ ವಿದ್ಯುತ್ ಮಾರ್ಗದ ತಂತಿಗಳ ಮೇಲೆ ಬಿದ್ದ ಪರಿಣಾಮ, ನಾಲ್ಕೈದು ವಿದ್ಯುತ್ ಕಂಬಗಳು ಮತ್ತು ಮರ, ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದಿತು. ಇದರಿಂದ ಈ ಭಾಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಯಿತು.

ವೆಂಕಟಾಲ ಗ್ರಾಮದಲ್ಲಿ ಬೃಹತ್ ಗಾತ್ರದ ಮರವೊಂದು ವಿದ್ಯುತ್ ತಂತಿಗಳ ಮೇಲೆ ಬಿದ್ದಿತು. ಇದರಿಂದ ವಿದ್ಯುತ್ ಕಂಬ ತುಂಡಾಯಿತು. ಮರ ಮತ್ತು ವಿದ್ಯುತ್ ಕಂಬ ಮನೆಯ ಮೇಲೆ ಬಿದ್ದ ಪರಿಣಾಮಪಕ್ಕದ ಮನೆಗಳಿಗೆ ಹಾನಿಯಾಯಿತು. ನಂತರ ಬಿಬಿಎಂಪಿ ಮತ್ತು ಬೆಸ್ಕಾಂ ಸಿಬ್ಬಂದಿ, ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ಕೈಗೊಂಡು ಮರಗಳನ್ನು ತೆರವುಗೊಳಿಸಿದರು.

ADVERTISEMENT

ಹಲವು ಗಂಟೆಗಳ ಕಾಲ ವಿದ್ಯುತ್‌ ವ್ಯತ್ಯಯವಾಗಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.