
ಬೆಂಗಳೂರು: ಮಳೆ ನೀರನ್ನು ಹೆಚ್ಚಾಗಿ ಸಂಗ್ರಹಿಸಲು ಕೆರೆಗಳ ವ್ಯವಸ್ಥೆಯನ್ನು ಉತ್ತಮಪಡಿಸಬೇಕಾದ ಅಗತ್ಯವಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹೇಳಿದರು.
ಜನ ಅರ್ಬನ್ ಸ್ಪೇಸ್ ಫೌಂಡೇಷನ್ ಆಯೋಜಿಸಿದ್ದ ‘ಬೆಂಗಳೂರಿಗಾಗಿ ಪ್ರಕೃತಿ ಆಧಾರಿತ ಪರಿಹಾರಗಳು: ಒಳಚರಂಡಿ ವ್ಯವಸ್ಥೆಯ ಕುರಿತ ಪರಾಮರ್ಶೆಗಳು’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
ಚರಂಡಿಗಳಿಂದ ಕೊಳಚೆನೀರನ್ನು ಹೊರಗಿಡುವುದು, ಒಳಚರಂಡಿಯನ್ನು ಬಲಪಡಿಸುವುದು, ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಸೃಷ್ಟಿಸಬೇಕಿದೆ. ಸಾರ್ವಜನಿಕರು ಮಳೆ ನೀರು ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
‘ನಗರ ಒಳಚರಂಡಿ ವ್ಯವಸ್ಥೆಗಳ ಪುನರ್ ನಿರ್ಮಾಣ: ಬೆಂಗಳೂರಿನ ನಲ್ಲೂರಹಳ್ಳಿ ನಾಲಾ ಪುನಶ್ಚೇತನದಿಂದ ಕಲಿತ ಪಾಠಗಳು’ ಎಂಬ ಕರಡು ವರದಿಯನ್ನು ಮಹೇಶ್ವರ್ ರಾವ್ ಬಿಡುಗಡೆ ಮಾಡಿದರು.
ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್, ಜನ ಅರ್ಬನ್ ಸ್ಪೇಸ್ ಫೌಂಡೇಷನ್ ನಿರ್ದೇಶಕಿ ನಿತ್ಯಾ ರಮೇಶ್, ಮರ್ಸಿಡಿಸ್–ಬೆನ್ಜ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಇಂಡಿಯಾದ ಉಪಾಧ್ಯಕ್ಷೆ ಶ್ವೇತಾ ಪಾಂಡೆ, ನ್ಯಾಷನಲ್ ಇ-ಗವರ್ನನ್ಸ್ ಸರ್ವೀಸಸ್ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕಿ ಇ. ಪಿ. ನಿವೇದಿತಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.