ADVERTISEMENT

ಭಾರತೀಯ ಸ್ಟೇಟ್ ಬ್ಯಾಂಕ್ ಕನ್ನಡ ಸಂಘಗಳ ಸಮನ್ವಯ ಸಮಿತಿಯ ಪಾ ರಾಜಗೋಪಾಲ್ ನಿಧನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 13:59 IST
Last Updated 31 ಡಿಸೆಂಬರ್ 2025, 13:59 IST
ಪಾ ರಾಜಗೋಪಾಲ
ಪಾ ರಾಜಗೋಪಾಲ   

ಬೆಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್ ಕನ್ನಡ ಸಂಘಗಳ ಸಮನ್ವಯ ಸಮಿತಿಯ ಸ್ಥಾಪಕ ಪ್ರಧಾನ ಕಾರ್ಯದರ್ಶಿ, ಮಲ್ಲೇಶ್ವರ ನಿವಾಸಿ ಪಾ ರಾಜಗೋಪಾಲ್ (79) ಬುಧವಾರ ನಿಧನರಾದರು. 

ಎಸ್‌ಬಿಐನಲ್ಲಿ 1972ರಲ್ಲಿಯೇ ಮೊದಲ ಕನ್ನಡ ಸಂಘವನ್ನು ಸ್ಥಾಪಿಸಿದ್ದರು. ಬ್ಯಾಂಕಿಂಗ್‌ ಶಬ್ದಗಳಿಗೆ ಕನ್ನಡದ ಪಾರಿಭಾಷಿಕ ಪದಗಳನ್ನು ಸೃಷ್ಟಿಸುತ್ತಿದ್ದರು. ಎಚ್‌ಎಸ್‌ಕೆ ಅವರ ಮಾರ್ಗದರ್ಶನದಲ್ಲಿ ‘ಬ್ಯಾಂಕಿಂಗ್ ನಿಘಂಟು’ ತರುವುದರಲ್ಲಿ ಹಾಗೂ ‘ಬ್ಯಾಂಕಿಂಗ್ ಪ್ರಪಂಚ’ ತ್ರೈಮಾಸಿಕ ಪತ್ರಿಕೆಯ ಪ್ರಕಟಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT