ರಾಜರಾಜೇಶ್ವರಿನಗರ: ‘ನಾಡಪ್ರಭು ಕೆಂಪೇಗೌಡರು, ಎಲ್ಲ ವರ್ಗದವರಿಗೆ, ಧರ್ಮದವರಿಗೂ ಬದುಕನ್ನು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಬೆಂಗಳೂರನ್ನು ನಿರ್ಮಿಸಿದರು’ ಎಂದು ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹನುಮಂತರಾಯಪ್ಪ ಹೇಳಿದರು.
ನಾಡಪ್ರಭು ಶ್ರೀಕೆಂಪೇಗೌಡ ಟ್ರಸ್ಟ್ ವತಿಯಿಂದ ಲಗ್ಗೆರೆಯ ಹೊರ ವರ್ತುಲ ರಸ್ತೆಯ ಪಾರ್ಕ್‌ನಲ್ಲಿ ಸ್ಥಾಪಿಸುತ್ತಿರುವ ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, 'ಕೆಂಪೇಗೌಡರ ಬೆಂಗಳೂರು ಇಂದು ಸಿಲಿಕಾನ್ ನಗರವಾಗಿ ಜಗದ್ವಿಖ್ಯಾತಿಯಾಗಿದೆ’ ಎಂದರು.
ಇದೇ ವೇಳೆ ಪ್ರತಿಮೆ ಸ್ಥಾಪನೆಗೆ ₹10 ಲಕ್ಷ ಕೊಡುವುದಾಗಿ ಭರವಸೆ ನೀಡಿದರು.
ಟ್ರಸ್ಟ್ ಅಧ್ಯಕ್ಷ ಎಚ್.ಎಸ್.ಸಿದ್ದೇಗೌಡ, ‘₹1 ಕೋಟಿ ವೆಚ್ಚದಲ್ಲಿ ದಾನಿಗಳ ನೆರವಿನಿಂದ ಕೆಂಪೇಗೌಡರ ಕಂಚಿನ ಪುತ್ಥಳಿ ನಿರ್ಮಾಣವಾಗಲಿದೆ’ ಎಂದರು.
ಬಿಬಿಎಂಪಿ ಮಾಜಿ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ, ಜೆಡಿಎಸ್ ಲಗ್ಗೆರೆ ವಾರ್ಡ್ ಸಮಿತಿ ಅಧ್ಯಕ್ಷ ಎನ್.ಚಂದ್ರಶೇಖರ್ ಮಾತನಾಡಿದರು. ಶಾಸಕ ಕೆ.ಗೋಪಾಲಯ್ಯ, ದಾಸರಹಳ್ಳಿ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಜಿ.ಎಚ್.ಕೃಷ್ಣಮೂರ್ತಿ, ಬಿಡಿಎ ಸದಸ್ಯ ಪುಟ್ಟಸ್ವಾಮಿಗೌಡ, ಟ್ರಸ್ಟ್ ಪದಾಧಿಕಾರಿಗಳಾದ ಮುನಿಗಂಗಪ್ಪ, ಜಗದೀಶ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.