ADVERTISEMENT

ಬಿಇಎಲ್ ನಿರ್ದೇಶಕರಾಗಿ ರಾಜಶೇಖರ ನೇಮಕ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 18:08 IST
Last Updated 3 ಸೆಪ್ಟೆಂಬರ್ 2020, 18:08 IST
ಎಂ.ವಿ. ರಾಜಶೇಖರ್ 
ಎಂ.ವಿ. ರಾಜಶೇಖರ್    

ಬೆಂಗಳೂರು: ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನ (ಬಿಇಎಲ್‌) ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ನೂತನ ನಿರ್ದೇಶಕರಾಗಿ ಎಂ.ವಿ. ರಾಜಶೇಖರ್‌ ಇತ್ತೀಚೆಗೆ ಅಧಿಕಾರ ವಹಿಸಿಕೊಂಡರು.

ಬಿಇಎಲ್‌ನ ಕೇಂದ್ರೀಯ ಸಂಶೋಧನಾ ಪ್ರಯೋಗಾಲಯದ ಪ್ರಧಾನ ವಿಜ್ಞಾನಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. 1985ರಲ್ಲಿ ಬಿಇಎಲ್‌ ಗಾಜಿಯಾಬಾದ್‌ನಲ್ಲಿ ಎಂಜಿನಿಯರ್‌ ಆಗಿ ನೇಮಕಗೊಳ್ಳುವ ಮೂಲಕ ಅವರ ವೃತ್ತಿಜೀವನ ಆರಂಭವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT