ADVERTISEMENT

ಅಸ್ಥಿಮಜ್ಜೆ ಕಸಿ: ರಾಮಯ್ಯ ಆಸ್ಪತ್ರೆಗೆ ಫ್ಯಾಕ್ಟ್ ಮಾನ್ಯತೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 16:02 IST
Last Updated 18 ಫೆಬ್ರುವರಿ 2026, 16:02 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೃಪೆ: ಎಐ

ಬೆಂಗಳೂರು: ರಾಮಯ್ಯ ಸ್ಮಾರಕ ಆಸ್ಪತ್ರೆಯು ಅಸ್ಥಿಮಜ್ಜೆ ಚಿಕಿತ್ಸೆಗೆ ಸಂಬಂಧಿಸಿದಂತೆ ಜಾಗತಿಕ ಮಟ್ಟದ ಫೌಂಡೇಷನ್ ಫಾ‌ರ್ ದಿ ಆಫ್ ಸೆಲ್ಯೂಲರ್ ಥೆರಪಿ (ಪ್ಯಾಕ್ಟ್) ಮಾನ್ಯತೆ ಪಡೆದಿದೆ. ದೇಶದ ಎರಡು ಆಸ್ಪತ್ರೆಗಳಷ್ಟೇ ಈ ಮಾನ್ಯತೆ ಪಡೆದಿದ್ದು, ಅದರಲ್ಲಿ ರಾಮಯ್ಯ ಆಸ್ಪತ್ರೆ ಒಂದಾಗಿದೆ ಎಂದು ಗೋಕುಲ ಎಜುಕೇಷನ್ ಫೌಂಡೇಷನ್ (ವೈದ್ಯಕೀಯ) ಅಧ್ಯಕ್ಷ ಡಾ. ಎಂ.ಆರ್. ಜಯರಾಂ ತಿಳಿಸಿದರು.

ADVERTISEMENT

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸೆಲ್ಯೂಲರ್ ಥೆರಪಿ ಮತ್ತು ಅಸ್ತಿಮಜ್ಞೆ ಚಿಕಿತ್ಸೆಯ ವೇಳೆ ಅನುಸರಿಸುವ ಸುರಕ್ಷತೆ ಮತ್ತು ಕಾಯ್ದುಕೊಳ್ಳುವ ಗುಣಮಟ್ಟತೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಭಾರತದಲ್ಲಿ ಫ್ಯಾಕ್ಸ್ ಮತ್ತು ಜಂಟಿ ಕಮಿಷನ್ ಇಂಟರ್ ನ್ಯಾಷನಲ್‌ (ಜಿಸಿಐ) ಈ ಎರಡು ಮಾನ್ಯತೆಯನ್ನು ಪಡೆದಿರುವ ಏಕೈಕ ಆಸ್ಪತ್ರೆ ಇದಾಗಿದೆ’ ಎಂದು ಹೇಳಿದರು.

‘ದಾನಿಗಳ ಸುರಕ್ಷತೆ, ಸ್ಟೆಮ್ ಸೆಲ್(ಜೀವಕೋಶ) ಪ್ರಗತಿ, ಕ್ರಿನಿಕಲ್ ಪ್ರಕ್ರಿಯೆ, ದೀರ್ಘಕಾಲದ ಅನುಸರಣೆ, ನಿರಂತರ ಗುಣಮಟ್ಟತೆಯ ಪ್ರಗತಿ, ನಾವು ನೀಡುವ ಚಿಕಿತ್ಸಾ ವಿಧಾನ ಗಮನಿಸಿ ಈ ಮಾನ್ಯತೆ ನೀಡಲಾಗಿದೆ’ ಎಂದರು.

ಫ್ಯಾಕ್ಟ್‌ ಕಂಪನಿಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಫಿಲ್ಲಿಸ್ ವಾರ್ಕೆಂಟಿನ್ ಮಾತನಾಡಿ, ‘ಭಾರತದಲ್ಲಿ ರಕ್ತದ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಅಂದಾಜಿನ ಪ್ರಕಾರ ವಾರ್ಷಿಕ 1.20 ಲಕ್ಷ ಪ್ರಕರಣಗಳು ಪತ್ತೆಯಾಗುತ್ತಿವೆ. ಇದರಲ್ಲಿ 70 ಸಾವಿರ ಮಂದಿ ಮೃತರಾಗುತ್ತಿದ್ದಾರೆ. ಅಲ್ಲದೇ ತಲ್ಸೇಮಿಯಾ ಚಿಕಿತ್ಸೆಗೆ ರಕ್ತದ ಕೊರತೆ ಇದೆ. ಈ ಎಲ್ಲ ಕಾರಣದಿಂದಾಗಿ ಅಸ್ಥಿಮಜ್ಜೆ ಚಿಕಿತ್ಸೆ ಅವಶ್ಯಕವಾಗಿದೆ. ಈ ಚಿಕಿತ್ಸೆಯನ್ನು ಗುಣಮಟ್ಟ ಮತ್ತು ಸುರಕ್ಷಿತವಾಗಿ ನೀಡುವಲ್ಲಿ ರಾಮಯ್ಯ ಆಸ್ಪತ್ರೆ ಹೆಸರುವಾಸಿಯಾಗಿದೆ’ ಎಂದು ಶ್ಲಾಘೀಸಿದರು. 

ರಾಮಯ್ಯ ಸ್ಮಾರಕ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಸಿ.ನಾಗೇಂದ್ರ ಸ್ವಾಮಿ, ‘ಕರ್ನಾಟಕ ಮತ್ತು ಪಕ್ಕದ ರಾಜ್ಯಗಳ ಸಂಕೀರ್ಣ ರಕ್ತದ ಕಾಯಿಲೆಗಳ ಪ್ರಮುಖ ರೆಫರಲ್ ಕೇಂದ್ರ ಬೆಂಗಳೂರು ಆಗಿದೆ. ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯಲ್ಲಿ ಪ್ರತಿ ವರ್ಷ ಸುಮಾರು 1,000 ರೋಗಿಗಳನ್ನು ರಕ್ತದ ಕಾಯಿಲೆಗಳಿಗಾಗಿ ತಪಾಸಣೆ ಮಾಡಲಾಗುತ್ತದೆ. ಅದರಲ್ಲಿ ಸುಮಾರು 100 ಜನರು ಕ್ಲಿನಿಕಲ್ ದೃಷ್ಟಿಯಿಂದ ಕಸಿಗೆ ಅರ್ಹರಾಗಿರುತ್ತಾರೆ. ಆದರೆ, ದಾನಿಗಳ ಲಭ್ಯತೆ, ಸಾಗಾಟ ಮತ್ತು ಸುರಕ್ಷತೆಯ ಕಾರಣದಿಂದಾಗಿ ಕೇವಲ 30-40 ಜನರು ಕಸಿಗೆ ಒಳಪಡುತ್ತಾರೆ’ ಎಂದು ಮಾಹಿತಿ ನೀಡಿದರು.

ರಾಮಯ್ಯ ಸ್ಮಾರಕ ಆಸ್ಪತ್ರೆಯ ಆಂಕೋಲಜಿ ವಿಭಾಗದ ಮುಖ್ಯಸ್ಥ ಡಾ. ಸಂತೋಷ್ ಕೆ. ದೇವದಾಸ್, ಡಾ. ಡಾಮಿಯಾನೊ ರೊಂಡೆಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.