ADVERTISEMENT

ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗಳಿಗೆ ಜೈಲು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 6:11 IST
Last Updated 27 ನವೆಂಬರ್ 2019, 6:11 IST
   

ಬೆಂಗಳೂರು: ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ಮತ್ತು ಕೃತ್ಯಕ್ಕೆ ಸಹಕರಿಸಿದ ಆರೋಪಿಗಳಿಗೆ ಸಿಸಿಎಚ್ 71ನೇ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

ಶಾಕಾಂಬರಿನಗರದ ಜಗದೀಶ್‌ಕುಮಾರ್ (27) ಮತ್ತು ಜೀವನ್ ಅಲಿಯಾಸ್ ಎಸ್.ಜೆ ಸೆಲ್ಲಿ (30) ಶಿಕ್ಷೆಗೆ ಗುರಿಯಾದವರು. 2013ರಲ್ಲಿ ಜೆ.ಪಿ. ನಗರದ ಒಂದನೇ ಹಂತದ ನಿವಾಸಿಯಾಗಿದ್ದ ಬಾಲಕಿಯನ್ನು ಆರೋಪಿಗಳು, ಪುಸಲಾಯಿಸಿ ಮೂಡಿಗೆರೆ ತಾಲ್ಲೂಕಿನ ಜನ್ನಾಪುರಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು. ಆರೋಪಿಗಳನ್ನು ಬಂಧಿಸಿದ್ದ ಜೆ.ಪಿ. ನಗರದ ಪೊಲೀಸರು, ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಮೊದಲನೇ ಆರೋಪಿ ಜಗದೀಶ್‌ಕುಮಾರ್‌ಗೆ 10 ವರ್ಷ ಜೈಲು ಹಾಗೂ ₹ 5 ಸಾವಿರ ದಂಡ, ಎರಡನೇ ಆರೋಪಿ ಜೀವನ್‌ಗೆ ಏಳು ವರ್ಷ ಜೈಲು ಮತ್ತು ₹ 3 ಸಾವಿರ ದಂಡ ವಿಧಿಸಿ ನ್ಯಾಯಾಧೀಶ ಮೋಹನ್ ಪ್ರಭು ಆದೇಶ ನೀಡಿದ್ದಾರೆ. ಸಂತ್ರಸ್ತೆ ಪರ ಸರ್ಕಾರಿ ವಕೀಲೆ ಮೀನಾಕುಮಾರಿ‌ ಎಸ್. ರಾಜವಂಶಿ ವಾದ ಮಂಡಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.