ADVERTISEMENT

ಕೋಗಿಲು ಸಂತ್ರಸ್ತರಿಗೆ ಪುನರ್ವಸತಿ: ಮಹೇಶ್ವರ್‌ ರಾವ್

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 18:43 IST
Last Updated 28 ಡಿಸೆಂಬರ್ 2025, 18:43 IST
ಎಂ. ಮಹೇಶ್ವರ್‌ ರಾವ್
ಎಂ. ಮಹೇಶ್ವರ್‌ ರಾವ್   

ಬೆಂಗಳೂರು: ಕೋಗಿಲು ಗ್ರಾಮದ ಅಪಾಯಕಾರಿ ಪ್ರದೇಶದಲ್ಲಿ ಶೀಟ್‌ ಹಾಕಿಕೊಂಡಿದ್ದವರಿಗೆ ಪುನರ್ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್‌ ತಿಳಿಸಿದ್ದಾರೆ.

ಈ ಬಗ್ಗೆ ಅವರು ‘ಎಕ್ಸ್‌’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕೋಗಿಲು ಗ್ರಾಮದ ಸರ್ಕಾರಿ ಗೋಮಾಳ ಜಮೀನಿನ ಸರ್ವೆ ಸಂಖ್ಯೆ 99ರಲ್ಲಿ 15 ಎಕರೆ ಜಾಗವು ಘನತ್ಯಾಜ್ಯ ವಿಲೇವಾರಿಗೆ ಬಳಸಲಾಗುವ ಕ್ವಾರಿ ಭೂಮಿಯಾಗಿದೆ. ಇದು ಮಾನವನ ವಾಸಕ್ಕೆ ಅತ್ಯಂತ ಅಪಾಯಕಾರಿಯಾಗಿದೆ. ತ್ಯಾಜ್ಯ ಡಂಪ್‌ ಮಾಡುವ ಈ ಪ್ರದೇಶದಲ್ಲಿ ಕೆಲವರು ಅನಧಿಕೃತವಾಗಿ ಶೆಡ್‌ಗಳನ್ನು ಕಟ್ಟಿಕೊಂಡಿದ್ದರು. ಅವುಗಳನ್ನು ಡಿ.20ರಂದು ತೆರವುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ನಿರಾಶ್ರಿತರಲ್ಲಿ ಅರ್ಹರಾದವರನ್ನು ಸರ್ಕಾರಿ ಯೋಜನೆಗಳ ಅಡಿಯಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಪರಿಗಣಿಸಲಾಗುವುದು ಎಂದು ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.