ADVERTISEMENT

‘ಸರ್ವರನ್ನೂ ಸಮಾನವಾಗಿ ಕಂಡ ಶ್ರೀಗಳು’

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 19:14 IST
Last Updated 21 ಜನವರಿ 2021, 19:14 IST
ಕಾರ್ಯಕ್ರಮದಲ್ಲಿ ವಿ. ಸೋಮಣ್ಣ, ಡಾ. ಸಿದ್ದಲಿಂಗಯ್ಯ, ಶಿವರುದ್ರ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಶೈಲಜಾ ಸೋಮಣ್ಣ ಮತ್ತು ಪ್ರತಾಪ್ ಸಿಂಹ ಅವರು ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು
ಕಾರ್ಯಕ್ರಮದಲ್ಲಿ ವಿ. ಸೋಮಣ್ಣ, ಡಾ. ಸಿದ್ದಲಿಂಗಯ್ಯ, ಶಿವರುದ್ರ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಶೈಲಜಾ ಸೋಮಣ್ಣ ಮತ್ತು ಪ್ರತಾಪ್ ಸಿಂಹ ಅವರು ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು   

ಬೆಂಗಳೂರು: ‘ತುಮಕೂರು ಸಿದ್ಧಗಂಗಾಮಠದ ಶಿವಕುಮಾರ ಸ್ವಾಮೀಜಿಯವರು ಲಿಂಗಾಯತರು, ವೀರಶೈವರನ್ನು ಮಾತ್ರವಲ್ಲದೆ ಸರ್ವರನ್ನೂ ಸಮಾನರಾಗಿ ಕಾಣುತ್ತಿದ್ದರು. ಯಾವುದೇ ರಾಜ್ಯ, ದೇಶಕ್ಕೆ ಹೋದರೂ ಅಲ್ಲಿ ಮಠದ ಭಕ್ತರು ಇರುತ್ತಾರೆ’ ಎಂದು ವಸತಿ ಸಚಿವ ವಿ. ಸೋಮಣ್ಣ ನೆನಪಿಸಿಕೊಂಡರು.

ನಗರದಲ್ಲಿ ಗುರುವಾರ ವಿ.ಸೋಮಣ್ಣ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಶಿವಕುಮಾರ ಸ್ವಾಮೀಜಿ
ಯವರ ಎರಡನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಸದ ಪ್ರತಾಪ ಸಿಂಹ, ‘ಶಂಕರಾಚಾರ್ಯರು, ಮಧ್ವಾಚಾರ್ಯರು ಮತ್ತು ರಾಮಾನುಜಾಚಾರ್ಯರನ್ನು ಆಚಾರ್ಯತ್ರಯರು ಎಂದು ಕರೆಯುತ್ತಾರೆ. ಅದೇ ರೀತಿ, ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥರು ನಮ್ಮ ಕಾಲದ ಆಚಾರ್ಯತ್ರಯರು’ ಎಂದು ಹೇಳಿದರು.

ADVERTISEMENT

ಬೇಲಿಮಠದ ಶಿವರುದ್ರ ಸ್ವಾಮೀಜಿ, ‘ಕಾಯಕ ದಾಸೋಹದ ಮೂಲಕ ವಿಶ್ವಕ್ಕೆ ಬಸವ ತತ್ವ ಸಾರಿದ ಮಹಾನ್ ಚೇತನ ಶಿವಕುಮಾರ ಸ್ವಾಮೀಜಿ. ಶ್ರೀಸಾಮಾನ್ಯರು ನೇರವಾಗಿ ಭೇಟಿ ಮಾಡಬಹುದಾದ ಸರಳ ಸ್ವಾಮೀಜಿ ಅವರಾಗಿದ್ದರು’ ಎಂದರು.

ಸಾಹಿತಿ ಸಿದ್ದಲಿಂಗಯ್ಯ, ‘21ನೇ ಶತಮಾನದಲ್ಲಿ ಬಸವ ತತ್ವವನ್ನು ಪ್ರಪಂಚಕ್ಕೆ ಸಾರಿದ ಮಹಾನ್ ಸಂತ ಶಿವಕುಮಾರ ಸ್ವಾಮೀಜಿ. ಅನ್ನ, ಅಕ್ಷರ, ಆಶ್ರಯ ನೀಡಿ ಕನ್ನಡಿಗರ ಮನಗೆದ್ದರು’ ಎಂದರು.

ಆದಿಚುಂಚನಗಿರಿ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಪ್ರತಿಷ್ಠಾನದ ಅಧ್ಯಕ್ಷ ಶೈಲಜಾ ಸೋಮಣ್ಣ, ಆರ್‌ಎಸ್ಎಸ್ ಮುಖಂಡ ತಿಪ್ಪೇಸ್ವಾಮಿ, ಬಿಜೆಪಿ ಮುಖಂಡರಾದ ಡಾ. ಎಸ್.ರಾಜು, ಕೆ.ಉಮೇಶ್ ಶೆಟ್ಟಿ, ಮೋಹನ್ ಕುಮಾರ್,
ಶಾಂತಕುಮಾರಿ, ದಾಸೇಗೌಡ, ಮಧುಕುಮಾರಿ ವಾಗೀಶ್, ಲತಾ ಗೋಪಿನಾಥ್ ರಾಜು, ಶಿಲ್ಪಾ ಶ್ರೀಧರ್, ರೂಪಾ ಲಿಂಗೇಶ್ವರ್, ವಿಶ್ವನಾಥ ಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.