ಬೆಂಗಳೂರು: ದಕ್ಷಿಣ ತಾಲ್ಲೂಕಿನ ಚೋಳನಾಯಕನಹಳ್ಳಿಯ ಗ್ರಾಮದೇವತೆ ಮಾರಮ್ಮನ ದೇವಸ್ಥಾನದ ಜೀರ್ಣೋದ್ಧಾರ, ವಿಗ್ರಹ ಪ್ರತಿಷ್ಠಾಪನೆ ಹಾಗೂ ಅಷ್ಟಬಂಧನ ಮಹಾಕುಂಭಾಭಿಷೇಕ ನೆರವೇರಿತು.
ಆದಿಚುಂಚನಗಿರಿ ಪೀಠದ ನಿರ್ಮಲಾನಂದನಾಥ ಸ್ವಾಮೀಜಿ ದೇವಸ್ಥಾನ ಉದ್ಘಾಟಿಸಿದರು. ‘ದೇಹವನ್ನು ಶುದ್ಧಿಗೊಳಿಸಲು ಕೆರೆ, ನದಿ, ಕಾಲುವೆಗಳು ಇರುವಂತೆ ಮನಸ್ಸನ್ನು ಶುಚಿಗೊಳಿಸುವ ಜಾಗವೇ ದೇವಸ್ಥಾನ. ಧ್ಯಾನ, ಪೂಜೆಯ ಮೂಲಕ ನಿಮ್ಮ ಮನಸ್ಸುಗಳನ್ನು ಶುಚಿಗೊಳಿಸಿಕೊಳ್ಳಿ’ ಎಂದು ಸ್ವಾಮೀಜಿ ತಿಳಿಸಿದರು.
ಸ್ಪಟಿಕಪುರಿ ಪೀಠದ ನಂಜಾವಧೂತ ಸ್ವಾಮೀಜಿ, ಸಿದ್ಧರಾಮೇಶ್ವರ ಮಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಬೆಳವಂಗಲ ಖಾನಿಮಠದ ಬಸವರಾಜ ಸ್ವಾಮೀಜಿ, ಜೇಡರಹಳ್ಳಿಯ ಎಚ್.ಎಂ. ಕೃಷ್ಣಪ್ಪ, ಬಂಡೆಮಠದ ಸಚ್ಚಿದಾನಂದ ಸ್ವಾಮೀಜಿ, ಜಡೇದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ, ಜಗ್ಗಣ್ಣಯ್ಯ ಮಠದ ಚನ್ನಬಸವ ಸ್ವಾಮೀಜಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.