
ಬಂಧನ
ಬೆಂಗಳೂರು: ಗುಟ್ಕಾ ಮಾರಾಟಗಾರರು ತೆರಳುತ್ತಿದ್ದ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿ, ಹಣ ಸುಲಿಗೆ ಮಾಡಿದ್ದ ಆರೋಪಿಗಳ ಪೈಕಿ ಮಾಗಡಿ ಮಂಜ ಎಂಬಾತನನ್ನು ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮುಖೇಶ್ ಭಾಯ್ ಬಿ ರಬಾರಿ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
‘ಮುಖೇಶ್ ಭಾಯ್ ಬಿ. ರಬಾರಿ ಹಾಗೂ ಜಮಾಭಾಯ್ ಅವರು ₹3.65 ಲಕ್ಷ ಮೌಲ್ಯದ ವಿವಿಧ ಮಾದರಿಯ ಗುಟ್ಕಾ ಪದಾರ್ಥಗಳನ್ನು ಕಾರಿನಲ್ಲಿ ತುಂಬಿಕೊಂಡು ಬಿಇಎಲ್ ಲೇಔಟ್‌ನಲ್ಲಿ ತೆರಳುತ್ತಿದ್ದರು. ಪಾವನಿ ಚಾಟ್ಸ್ ಬಳಿ ಕಾರು ಅಡ್ಟಗಟ್ಟಿದ ಮಾಗಡಿ ಮಂಜ ಮತ್ತು ಸಹಚರರು, ಕಾರಿನ ಗಾಜು ಒಡೆದು ಹಾಕಿದ್ದರು. ನಂತರ ಮೊಬೈಲ್ ಕಸಿದುಕೊಂಡು ₹ 10 ಲಕ್ಷ ನೀಡುವಂತೆ ಬೆದರಿಕೆ ಹಾಕಿದ್ದರು. ಬಳಿಕ ಮುಖೇಶ್ ಭಾಯ್ ಬಿ ರಬಾರಿ ಹಾಗೂ ಜಮಾಭಾಯ್ ಅವರ ಬಳಿಯಿದ್ದ ₹2 ಲಕ್ಷ ಕಸಿದುಕೊಂಡು ಪರಾರಿ ಆಗಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.