ADVERTISEMENT

ರೋಟರಿ ಇನ್ನರ್‌ವೀಲ್‌ ಕ್ಲಬ್‌: ಪ್ರೇಮಾ ಅಯ್ಯರ್ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 18:53 IST
Last Updated 13 ಜುಲೈ 2020, 18:53 IST

ಬೆಂಗಳೂರು: ರೋಟರಿ ಬೆಂಗಳೂರಿನ 319ನೇ ಜಿಲ್ಲೆಯ ಇನ್ನರ್‌ವೀಲ್ ಕ್ಲಬ್‍ನ ನೂತನ ಅಧ್ಯಕ್ಷರಾಗಿ ಪ್ರೇಮಾ ಐಯ್ಯರ್ ಸೋಮವಾರ ಅಧಿಕಾರ ಸ್ವೀಕರಿಸಿದರು.

ಆನ್‍ಲೈನ್ ಮೂಲಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ 'ಮನಸ್ವಿತಾ' ತಂಡಕ್ಕೆ 2020-21ನೇ ಸಾಲಿನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ನೂತನ ಪದಾಧಿಕಾರಿಗಳಾಗಿ ತಸ್ನೀಮ್ ಜಿರೂವಾಲಾ (ಐಪಿಪಿ), ವೀಣಾ ಸುಬ್ಬಯ್ಯ (ಉಪಾಧ್ಯಕ್ಷೆ), ಗೀತಾ ವಿಶ್ವನಾಥನ್ (ಕಾರ್ಯದರ್ಶಿ), ಉದಯ ರೆಡ್ಡಿ (ಖಜಾಂಚಿ), ಚಂಪಾ ದಿಲೀಪ್ (ಐಎಸ್‍ಒ), ಪ್ರಗ್ಯಾ ಜೈನ್ (ಸಂಪಾದಕಿ), ಪವಿತ್ರಾ ರೆಡ್ಡಿ (ಜಂಟಿ ಕಾರ್ಯದರ್ಶಿ), ವೀಣಾ ವಿಶ್ವನಾಥ್ (ಜಂಟಿ ಖಜಾಂಚಿ) ಹಾಗೂ ಸದಸ್ಯರಾಗಿ ಉಷಾ ವಿಜಯನ್, ಚಾಂದಿನಿ ಅಯ್ಯರ್, ಮಾಲಿನಿ ರಮೇಶ್, ದಾಕ್ಷಾಯಿಣಿ ಸುರೇಶ್, ಚಂದ್ರಿಕಾ ತ್ಯಾಗರಾಜನ್, ಸುಧಾ ದಿನೇಶ್ ಅಧಿಕಾರ ಸ್ವೀಕರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.