ADVERTISEMENT

ನಟ ಪುನೀತ್‌ಗೆ ಮರಣೋತ್ತರ ‘ರೋಟರಿ ವೃತ್ತಿ ಸೇವಾ ಪರಿಣಿತ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 19:35 IST
Last Updated 23 ಡಿಸೆಂಬರ್ 2021, 19:35 IST
ನಟ ಪುನೀತ್‌ ರಾಜ್‌ಕುಮಾರ್ ಅವರಿಗೆ ರೋಟರಿ ಕ್ಲಬ್ ವತಿಯಿಂದ ಮರಣೋತ್ತರವಾಗಿ ನೀಡಲಾದ ‘ರೋಟರಿ ವೃತ್ತಿ ಸೇವಾ ಪರಿಣಿತ’ ಪ್ರಶಸ್ತಿಯನ್ನು ಚಲನಚಿತ್ರ ನಿರ್ಮಾಪಕ ಎ.ಚಿನ್ನೇಗೌಡ ಅವರು ಸ್ವೀಕರಿಸಿದರು. ಎ.ವಿ.ಸತ್ಯನಾರಾಯಣ, ಎಸ್.ರಂಗಪ್ಪ ಮತ್ತು ರೋಟರಿ ಬೆಂಗಳೂರು ಸಂಸ್ಥೆಯ ಹನುಮಂತನಗರ ಘಟಕದ ಪದಾಧಿಕಾರಿಗಳು ಹಾಗೂ ಕಲಾವಿದರು ಇದ್ದಾರೆ– ಪ್ರಜಾವಾಣಿ ಚಿತ್ರ

ಬೆಂಗಳೂರು:ನಟ ದಿವಂಗತ ಪುನೀತ್‌ ರಾಜ್‌ಕುಮಾರ್ ಅವರಿಗೆ ರೋಟರಿ ಕ್ಲಬ್ ವತಿಯಿಂದ ನೀಡಲಾದ ಮರಣೋತ್ತರವಾಗಿ ‘ರೋಟರಿ ವೃತ್ತಿ ಸೇವಾ ಪರಿಣಿತ’ ಪ್ರಶಸ್ತಿಯನ್ನು ಚಲನಚಿತ್ರ ನಿರ್ಮಾಪಕ ಎ.ಚಿನ್ನೇಗೌಡ ಅವರು ಸ್ವೀಕರಿಸಿದರು.

ರಾಜ್ಯದ 3190 ಜಿಲ್ಲೆಗಳ ರೋಟರಿ ಕ್ಲಬ್‌ಗಳ ಮತ್ತು ಸೃಷ್ಟಿ ಅಭಿನಯ ಕಲಾವಿದರ ಕೇಂದ್ರದ ವತಿಯಿಂದ ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಗುರುವಾರ ’ನಿತ್ಯ ಸತ್ಯ ನೃತ್ಯ ಪುನೀತ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್‌.ರಂಗಪ್ಪ, ‘ವ್ಯಕ್ತಿಯೊಬ್ಬ ಆದರ್ಶವಾಗಿ ಹೇಗೆ ಬದುಕಬೇಕೆಂದು ಪುನೀತ್ ತೋರಿಸಿಕೊಟ್ಟಿದ್ದಾರೆ. ಬಲಗೈಯಿಂದ ದಾನ ಮಾಡಿದರೆ ಎಡಗೈಗೆ ತಿಳಿಯಬಾರದು ಎನ್ನುವ ನಿಯಮವನ್ನು ಪಾಲಿಸಿದವರು ಅವರು. ಅವರ ಸಿನಿಮಾಗಳು ಮನರಂಜನೆ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ’ ಎಂದರು.

ADVERTISEMENT

ಬೆಂಗಳೂರು ಹನುಮಂತನಗರದ ರೋಟರಿ ಅಧ್ಯಕ್ಷ ಎ.ವಿ.ಸತ್ಯನಾರಾಯಣ ಉಪಸ್ಥಿತರಿದ್ದರು.ಸೃಷ್ಟಿ ಸೆಂಟರ್ ಮತ್ತು ಪುನೀತ್ ಅಭಿಮಾನಿಗಳು ನಟನಿಗೆ ನೃತ್ಯದ ಮೂಲಕ ಗೌರವ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.