ADVERTISEMENT

ಮತ್ತೆ ಫ್ಲೆಕ್ಸ್‌ ಬ್ಯಾನರ್ ಹಾವಳಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 20:15 IST
Last Updated 5 ಅಕ್ಟೋಬರ್ 2019, 20:15 IST
ಉತ್ತರಹಳ್ಳಿಯಲ್ಲಿ ಹಾಕಿದ ಫ್ಲೆಕ್ಸ್
ಉತ್ತರಹಳ್ಳಿಯಲ್ಲಿ ಹಾಕಿದ ಫ್ಲೆಕ್ಸ್   

ರಾಜರಾಜೇಶ್ವರಿ ನಗರ: ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್‌, ಬ್ಯಾನರ್‌ ಹಾವಳಿ ಮತ್ತೆ ಶುರುವಾಗಿದೆ. ನೂತನ ಮೇಯರ್‌ ಗೌತಮ್‌ಕುಮಾರ್‌ ಅವರಿಗೆ ಶುಭಕೋರುವ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳನ್ನು ರಾಜರಾಜೇಶ್ವರಿ ನಗರದ ಸುತ್ತ–ಮುತ್ತ ಹಾಗೂ ಐಡಿಯಲ್ಸ್‌ ಹೋಮ್‌ ಬಡಾವಣೆ,ಹೊಸಕೆರೆಹಳ್ಳಿ, ಮೂಡಲಪಾಳ್ಯ ಮುಂತಾದ ಕಡೆ ಹಾಕಲಾಗಿದೆ.

ಉತ್ತರಹಳ್ಳಿ ಬಸ್ ನಿಲ್ದಾಣ, ಸಹಾಯಕ ಕಂದಾಯ ಅಧಿಕಾರಿ ಕಚೇರಿ ಮುಂಭಾಗ, ಎ.ಜಿ.ಎಸ್ ಬಡಾವಣೆ ಸೇರಿದಂತೆ ಹಲವು ಕಡೆಪೌರಾಣಿಕ ನಾಟಕದ ಫ್ಲೆಕ್ಸ್‌ ಹಾಕಲಾಗಿದೆ.

ಕೆಂಗೇರಿ ಉತ್ತರಹಳ್ಳಿ ರಸ್ತೆಯ ರಜತಾದ್ರಿ ಪ್ಯಾಲೇಸ್ ಸೇರಿದಂತೆ ಹಲವೆಡೆ ವಿವಿಧ ಕಂಪನಿಗಳ ಜಾಹೀರಾತು ಬೋರ್ಡ್‍ಗಳನ್ನು ಹಾಕಲಾಗಿದೆ.

ADVERTISEMENT

‘ಆಡಳಿತ ಪಕ್ಷದ ಜನಪ್ರತಿನಿಧಿಗಳು ಈ ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆರವುಗೊಳಿಸಲು ಬಿಡುವುದಿಲ್ಲ. ನಾವು ಮುಂದಾದರೂ, ಹಿರಿಯ ಅಧಿಕಾರಿಗಳು ನಮ್ಮ ಬೆಂಬಲಕ್ಕೆ ನಿಲ್ಲುವುದಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.