ADVERTISEMENT

ಬೆಂಗಳೂರು| ಕಾರ್ತಿಕ ಮಾಸ: ಅ.27ರವರೆಗೆ ರುದ್ರಾಕ್ಷಿ ಪ್ರದರ್ಶನ, ಮಾರಾಟ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 17:07 IST
Last Updated 23 ಅಕ್ಟೋಬರ್ 2025, 17:07 IST
ರುದ್ರಾಕ್ಷಿ
ರುದ್ರಾಕ್ಷಿ   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಕಾರ್ತಿಕ ಮಾಸ ನಿಮಿತ್ತ ನಗರದಲ್ಲಿ ಮಹಾ ರುದ್ರಾಕ್ಷಿ ಪ್ರದರ್ಶನ ಮತ್ತು ಮಾರಾಟವನ್ನು ಇದೇ 27ರವರೆಗೆ ಆಯೋಜಿಸಲಾಗಿದೆ.

ಜೆ.ಪಿ ನಗರ 1ನೇ ಹಂತದ ಸಂಗಮ ಸರ್ಕಲ್‌ ಬಸ್‌ ನಿಲ್ದಾಣದ ಬಳಿ ಇರುವ ಹೋಟೆಲ್‌ ಲಿ ಫೋಲಿಗ್‌ನಲ್ಲಿ ರುದ್ರಾಕ್ಷ ಸಂಸ್ಥೆ ವತಿಯಿಂದ ನೇಪಾಳದ ರುದ್ರಾಕ್ಷಿಗಳ ಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸಲಾಗಿದೆ.

ADVERTISEMENT

ಅತ್ಯಂತ ವಿರಳವಾಗಿರುವ ದುಂಡುಮುಖದ ಒಂದು ಮುಖಿ ರುದ್ರಾಕ್ಷಿಗಳೂ (ಸುಮಾರು ₹4.5 ಲಕ್ಷ) ಸೇರಿದಂತೆ ಹಲವು ರೀತಿಯ ರುದ್ರಾಕ್ಷಿಗಳು ಲಭ್ಯವಿವೆ.

‘ಯಾವ ರುದ್ರಾಕ್ಷಿಯನ್ನು ಯಾವಾಗ ಹಾಗೂ ಯಾರು ಧರಿಸಬೇಕು ಎಂಬುದರ ಬಗ್ಗೆ ಯಾವುದೇ ಪಂಚಾಂಗ ಮತ್ತು ಕಂಪ್ಯೂಟರ್ ಸಹಾಯವಿಲ್ಲದೆ, ವೇದ ಗಣಿತದ ಮೂಲಕ ಜನ್ಮರಾಶಿ, ಜನ್ಮನಕ್ಷತ್ರದ ಆಧಾರದ ಮೇಲೆ ತಿಳಿಸಲಾಗುವುದು. ಅಸಲಿ ಹಾಗೂ ನಕಲಿ ರುದ್ರಾಕ್ಷಿಗಳ ಭಿನ್ನತೆ ತಿಳಿಸಲಾಗುವುದು. ಗುಣಮಟ್ಟದ ರುದ್ರಾಕ್ಷಿಗಳನ್ನು ಗ್ರಾಹಕರಿಗೆ ಮಾರಾಟ ಮಾಡುವುದರಲ್ಲಿ ಇಂಡಸ್ -ನೇಪಾಳ ರುದ್ರಾಕ್ಷ ಸಂಸ್ಥೆ ವಿಶ್ವಾಸಾರ್ಹತೆ ಹೊಂದಿದೆ. ಆಸಕ್ತರಿಗೆ ಇತರ ಮುಖಗಳ ರುದ್ರಾಕ್ಷಿಗಳನ್ನು ತರಿಸಿ ಕೊಡಲಾಗುವುದು’ ಎಂದು ಇಂಡಸ್-ನೇಪಾಳ ಸಂಸ್ಥೆಯ ನಿರ್ದೇಶಕ ಡಾ. ನರೇಂದ್ರ ಕಾಶಿರೆಡ್ಡಿ ತಿಳಿಸಿದ್ದಾರೆ. 

ಪ್ರದರ್ಶನ ಮತ್ತು ಮಾರಾಟ ಬೆಳಿಗ್ಗೆ 10.30ರಿಂದ ರಾತ್ರಿ 9ರವರೆಗೆ ಇರಲಿದೆ. ಮಾಹಿತಿಗೆ: 70973 96666.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.