ಆರ್.ವಿ ವಿಶ್ವವಿದ್ಯಾಲಯ
(ಚಿತ್ರ ಕೃಪೆ: ಆರ್.ವಿ ವಿಶ್ವವಿದ್ಯಾಲಯ)
ಬೆಂಗಳೂರು: ನಗರದ ಆರ್.ವಿ ವಿಶ್ವವಿದ್ಯಾಲಯದಲ್ಲಿ ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸುವ ‘ನವೋದಯ’ ಕಾರ್ಯಕ್ರಮ ನಡೆಯಿತು.
ಕಾನೂನು, ಬಿಸಿನೆಸ್, ಎಕನಾಮಿಕ್ಸ್ ಆಂಡ್ ಪಬ್ಲಿಕ್ ಪಾಲಿಸಿ, ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್, ಡಿಸೈನ್ ಮತ್ತು ಇನ್ನೋವೇಷನ್, ಲಿಬರಲ್ ಆರ್ಟ್ಸ್ ಆಂಡ್ ಸೈನ್ಸ್, ಫಿಲ್ಮ್, ಮೀಡಿಯಾ ಆ್ಯಂಡ್ ಕ್ರಿಯೇಟಿವ್ ಆರ್ಟ್ಸ್ ಮತ್ತು ಸ್ಕೂಲ್ ಆಫ್ ಕಂಟಿನ್ಯೂಯಿಂಗ್ ಎಜುಕೇಷನ್ ಆ್ಯಂಡ್ ಪ್ರೊಫೆಷನಲ್ ಸ್ಟಡೀಸ್ ವಿಭಾಗಗಳ 2000 ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲಾಯಿತು.
ಮುಂದಿನ ವರ್ಷ ಮೈಸೂರಿನ ನಂಜನಗೂಡಿನಲ್ಲಿ ಆರ್.ವಿ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಆರಂಭವಾಗಲಿದೆ ಎಂದು ಕಾರ್ಯಕ್ರಮದಲ್ಲಿ ಘೋಷಿಸಲಾಯಿತು.
ಆರ್.ವಿ ವಿಶ್ವವಿದ್ಯಾಲಯದ ಕುಲಾಧಿಪತಿ ಎ.ವಿ.ಎಸ್. ಮೂರ್ತಿ ಮಾತನಾಡಿ, ‘ನವೋದಯ 2025 ಕಾರ್ಯಕ್ರಮವು ನಾಳೆಯ ನಾಯಕರು, ಸಂಶೋಧಕರು ಮತ್ತು ಚಿಂತಕರನ್ನು ರೂಪಿಸುವ ಒಂದು ದೀರ್ಘ ಪಯಣದ ಆರಂಭ’ ಎಂದು ಬಣ್ಣಿಸಿದರು.
ಎಂ.ಎಸ್ ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್ ಕುಲಪತಿ ಎಂ.ಆರ್. ಜಯರಾಮ್, ಯುಜಿಸಿ ಸದಸ್ಯ ಎಂ.ಕೆ. ಶ್ರೀಧರ್, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷ ಎಂ.ಪಿ. ಶ್ಯಾಮ್, ಸಹಕುಲಾಧಿಪತಿ ಡಿ.ಪಿ. ನಾಗರಾಜ್, ಆರ್‌ವಿಯು ನಿರ್ದೇಶಕ ನಿಖಿಲ್ ಎ. ಮೂರ್ತಿ, ಕುಲಪತಿ ದ್ವಾರಕಾ ಪ್ರಸಾದ್ ಉನಿಯಾಲ್, ಸಹ ಕುಲಪತಿ ಅನುರಾಧಾ ಚಟರ್ಜಿ, ಕುಲಸಚಿವೆ ಸಹನಾ ಡಿ. ಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.