
ಪೀಣ್ಯ ದಾಸರಹಳ್ಳಿ: ‘ದಾಸರಹಳ್ಳಿ ವಿಧಾನಸಭೆ ಕ್ಷೇತ್ರ ನಾಲ್ಕು ವಾರ್ಡ್‌ಗಳಲ್ಲಿ ನಿಧಾನಗತಿಯಲ್ಲಿರುವ ಕಾಮಗಾರಿಗಳಿಗೆ ಒಂದು ವಾರದಲ್ಲಿ ವೇಗ ನೀಡಬೇಕು’ ಎಂದು ಶಾಸಕ ಎಸ್. ಮುನಿರಾಜು ಅವರು ಉತ್ತರ ನಗರ ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್‌ಕುಮಾರ್ ಅವರೊಂದಿಗೆ ಮಂಗಳವಾರ ನಡೆಸಿದ ಅಧಿಕಾರಗಳ ಸಭೆಯಲ್ಲಿ ಅವರು ಮಾತನಾಡಿದರು.
‘ನಾಲ್ಕು ವಾರ್ಡ್ ಗಳಲ್ಲಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿವೆ. ಒಂದು ವಾರದೊಳಗೆ ಕಾನೂನು ಬದ್ಧ ಮತ್ತು ವ್ಯವಸ್ಥಿತವಾಗಿ ಎಲ್ಲಾ ಕಾಮಗಾರಿಗಳು ಚಾಲನೆ ಆಗಬೇಕು. ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ಅಧಿಕಾರಿಗಳಿಗೆ ಶಿಸ್ತಿನ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
ಎಂಜಿನಿಯರ್, ಕಂದಾಯ, ಜಲಮಂಡಳಿ, ಆರೋಗ್ಯ ಇಲಾಖೆ, ತೋಟಗಾರಿಕೆ, ಕಲ್ಯಾಣ ಇಲಾಖೆ ಮುಂತಾದ ಇಲಾಖೆಗಳ ಅಧಿಕಾರಿಗಳು ಬೇಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದರೆ, ಆಯುಕ್ತರು ಶಿಸ್ತು ಕ್ರಮ ಜರುಗಿಸಲಿದ್ದಾರೆ ಎಂದರು.
ಜಂಟಿ ಆಯುಕ್ತೆ ಪಲ್ಲವಿ ಕೆ.ಆರ್, ಮುಖ್ಯ ಎಂಜಿನಿಯರ್ ಯಮುನಾ, ಉಪ ಆಯುಕ್ತೆ ಮಂಗಳ ಗೌರಿ, ಅಧೀಕ್ಷಕ ಎಂಜಿನಿಯರ್ ಕೃಷ್ಣಕುಮಾರ್, ಜಲಮಂಡಳಿಯ ಕಾರ್ಯಕಾರಿ ಎಂಜಿನಿಯರ್ ಮಂಜುನಾಥ್, ಇನ್‌ಸ್ಪೆಕ್ಟರ್ ಹನುಮಂತರಾಜು ಉಪಸ್ಥಿತರಿದ್ದರು.
ಪರಿಶೀಲನೆ: ಗ್ರಾಮದಿಂದ ಗ್ರಾಮಕ್ಕೆ ಕೆರೆಯ ಏರಿ ಮೇಲಿನ ರಸ್ತೆ ಸಂಪರ್ಕ, ಕೆರೆಗಳ ಸುರಕ್ಷತೆ, ಅಭಿವೃದ್ಧಿ ಮತ್ತು ಒತ್ತುವರಿ ಬಗ್ಗೆ ಶಿವಪುರ ಮತ್ತು ನೆಲಗದರನಹಳ್ಳಿ ಕೆರೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಎಸ್. ಮುನಿರಾಜು ಪರಿಶೀಲನೆ ನಡೆಸಿದರು.
‘ಕೆರೆಗಳ ಏರಿಯ ಮೇಲೆ ಗ್ರಾಮದಿಂದ ಗ್ರಾಮಕ್ಕೆ ರಸ್ತೆ ಸಂಪರ್ಕವಿದೆ. ಯಾರಿಗೂ ತೊಂದರೆಯಾಗದಂತೆ ಸುರಕ್ಷಿತ ರಸ್ತೆ ಮತ್ತು ಕೆರೆ ಅಭಿವೃದ್ಧಿಪಡಿಸಲಾಗುತ್ತದೆ’ ಎಂದರು.
ಎಇಇ ವೆಂಕಟೇಶ್, ಎಇ ಪ್ರವೀಣ್, ಆರೋಗ್ಯ ಅಧಿಕಾರಿ ಮಮತಾ, ಬಿಜೆಪಿ ಮುಖಂಡರಾದ ಸಿ.ಎಂ. ನಾಗರಾಜು, ನಿಸರ್ಗ ಕೆಂಪರಾಜು, ಎಂ.ಕೆ. ಜಗದೀಶ್, ವೆಂಕಟೇಶ್ (ವೆಂಕಿ), ಕೌಸಲ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.