
ಬೆಂಗಳೂರು: ‘ಸನಾತನ ಧರ್ಮ ಎನ್ನುವುದು ಕೇವಲ ಆಚರಣೆಗಳ ಸಂಕಲನವಾಗಿರದೆ ಅದು ಜೀವನದ ದರ್ಶನವಾಗಿದೆ. ಕಾಲಕ್ಕೆ ಒಳಪಡದ, ಮಾನವೀಯ ಮೌಲ್ಯಗಳ ಮೇಲೆ ನಿಂತಿರುವ ಶಾಶ್ವತ ಚಿಂತನೆಯೇ ಸನಾತನ ಧರ್ಮ’ ಎಂದು ವಾಗ್ಮಿ ದುಷ್ಯಂತ್ ಶ್ರೀಧರ್ ಅಭಿಪ್ರಾಯಪಟ್ಟರು.
ಪಾಂಚಜನ್ಯ ಪ್ರತಿಷ್ಠಾನ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ 13ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ‘ಪಾಂಚಜನ್ಯ ಪುರಸ್ಕಾರ’ ಸ್ವೀಕರಿಸಿ, ಮಾತನಾಡಿದರು.
‘ಇಂದಿನ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳ ನಡುವೆ ಬೆಳೆದ ಯುವಕರು, ಸನಾತನ ಧರ್ಮದ ತತ್ವಗಳಿಂದ ಆಂತರಿಕ ಸ್ಥೈರ್ಯ, ನೈತಿಕ ಸ್ಪಷ್ಟತೆ ಮತ್ತು ಸಮತೋಲನದ ಬದುಕು ಕಲಿಯಬಹುದು. ಯೋಗ, ಧ್ಯಾನ, ಪರಿಸರ ಸಂರಕ್ಷಣೆ, ‘ವಸುದೈವ ಕುಟುಂಬಕಂ’ ಎಂಬ ತತ್ತ್ವಗಳು ಇಂದು ಜಗತ್ತೇ ಒಪ್ಪಿಕೊಂಡ ಮೌಲ್ಯಗಳಾಗಿವೆ’ ಎಂದರು.
ಪ್ರತಿಷ್ಠಾನ ಹೊರತಂದಿರುವ ನೂತನ ದಿನದರ್ಶಿಕೆಯನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು. ವಕೀಲ ಅಶೋಕ್ ಹಾರನಹಳ್ಳಿ, ಪ್ರತಿಷ್ಠಾನದ ಸ್ಥಾಪಕ ಟ್ರಸ್ಟಿ ಮುರಳಿ ಕಾಕೋಳು, ಟ್ರಸ್ಟಿಗಳಾದ ಎಸ್.ವಿ.ಸುಬ್ರಹ್ಮಣ್ಯ, ಅನಂತ ವೇದಗರ್ಭಂ, ವಿ.ಆರ್.ವೆಂಕಟೇಶ್ ಹಾಗೂ ಸಲಹೆಗಾರ ಕೆ ಎಸ್.ಸಮೀರಸಿಂಹ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.