
ಪಟ್ಲ ಯಕ್ಷೋತ್ಸವ
ಬೆಂಗಳೂರು: ಯಕ್ಷ ಧ್ರುವ ಪಟ್ಲ ಫೌಂಡೇಷನ್ ಬೆಂಗಳೂರು ಘಟಕದ ವತಿಯಿಂದ ಫೆ.1ರಂದು ಬೆಳಿಗ್ಗೆ 8.30ರಿಂದ ರಾತ್ರಿ 9 ಗಂಟೆವರೆಗೆ ವಿಜಯನಗರದ ಬಂಟರ ಸಂಘದಲ್ಲಿ ‘ಬೆಂಗಳೂರು ಪಟ್ಲ ಯಕ್ಷೋತ್ಸವ’ ಹಮ್ಮಿಕೊಳ್ಳಲಾಗಿದೆ.
ಗುರು ಸಂಜೀವ ಸುವರ್ಣ ಅವರ ನಿರ್ದೇಶನದಲ್ಲಿ ಯಕ್ಷ ಬ್ಯಾಲೆ, ‘ಹೆಜ್ಜೆ–ಗೆಜ್ಜೆ’ ಶೀರ್ಷಿಕೆಯಡಿ ಮಕ್ಕಳ ಯಕ್ಷಗಾನ ಸ್ಪರ್ಧೆ, ಮಕ್ಕಳಿಗೆ ‘ಯಕ್ಷ ಚಿತ್ರಸಂತೆ’, ‘ಕಾಳಿಂಗ–ಕಾಳಿಂಗ’ ಶೀರ್ಷಿಕೆಯಡಿ ಪಿ. ಕಾಳಿಂಗ ರಾವ್–ಕಾಳಿಂಗ ನಾವಡರ ಪದ ಪದ್ಯಗಳ ಅನುರಣನ, ತೆಂಕು ಬಡಗಿನ ದಿಗ್ಗಜರಿಂದ ‘ಕಟೀಲು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರಸಂಗ ಹಾಗೂ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಹೋರಾತ್ರಿ ಸಂಗೀತ
ಬೆಂಗಳೂರು: ರೇಣುಕಾ ಸಂಗೀತ ಸಭಾವು ಪಂಡಿತ್ ಅರ್ಜುನಸಾ ನಾಕೋಡ ಅವರ ಸ್ಮರಣಾರ್ಥ ಇದೇ 31ರಂದು ರಾತ್ರಿ 9.30ರಿಂದ ‘ಸ್ಮೃತಿ’ ಅಹೋರಾತ್ರಿ ಸಂಗೀತ ಕಾರ್ಯಕ್ರಮವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದೆ.
ಕಲಾವಿದರಾದ ವೆಂಕಟೇಶ್ ಕುಮಾರ್, ಯೋಗೇಶ್ ಸಂಶಿ, ಪತ್ರಿ ಸತೀಶ್ ಕುಮಾರ, ಗಿರಿಧರ ಉಡುಪ, ಪ್ರಣಮಿತಾ ರಾಯ್, ಅನಿರುದ್ಧ ಐತಾಳ್, ಷಡ್ಜ ಗೋಡ್ಖಿಂಡಿ, ಸುಮಂತ ಮಂಜುನಾಥ, ಅಂಕುಶ ಎನ್. ನಾಯಕ, ರಘುನಾಥ ನಾಕೋಡ, ವಿಶ್ವನಾಥ ನಾಕೋಡ, ರಾಜೇಂದ್ರ ನಾಕೋಡ, ರವಿಕಿರಣ ನಾಕೋಡ, ವ್ಯಾಸಮೂರ್ತಿ ಕಟ್ಟಿ, ನರೇಂದ್ರ ನಾಯಕ್, ಅರ್ಜುನ್ ಕುಮಾರ್ ಭಾಗವಹಿಸಲಿದ್ದಾರೆ.
ಗಾಯನದ ಜತೆಗೆ, ಸಂಗೀತ ವಾದ್ಯಗಳ ಜುಗಲ್‌ಬಂದಿ ನಡೆಯಲಿದೆ. ಪ್ರವೇಶ ಉಚಿತ ಇರಲಿದೆ.
ದಾಸ ನಿರಂತರ ಸಂಗೀತೋತ್ಸವ
ಬೆಂಗಳೂರು: ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಷನ್ ಟ್ರಸ್ಟ್ ಫೆ.1ರಂದು ಬೆಳಿಗ್ಗೆ 9.30ರಿಂದ ಜಯನಗರದಲ್ಲಿರುವ ಜೆಎಸ್ಎಸ್ ಸಭಾಂಗಣದಲ್ಲಿ ‘ದಾಸ ನಿರಂತರ’ ಸಂಗೀತೋತ್ಸವ ಹಮ್ಮಿಕೊಂಡಿದೆ.
ಸತತ 12 ಗಂಟೆಗಳ ಸಂಗೀತೋತ್ಸವ ಇದಾಗಿದೆ. ಚಲನಚಿತ್ರ ನಟ ಶ್ರೀನಿವಾಸ ಪ್ರಭು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಗೀತೋತ್ಸವದಲ್ಲಿ ವಾಗೀಶ್ ಭಟ್, ಅನಂತ್ ಭಾಗ್ವತ್, ಮಹಾದೇವಿ ಭಾಗ್ವತ್, ಅಶ್ವಿನ್ ಬಾಳಿಗ, ಪ್ರಸನ್ನ ಕೊರ್ತಿ, ಅನನ್ಯ ಭಾರ್ಗವ್, ನಾಗೇಂದ್ರ ರಾಣಾಪೂರ್, ಉಮಾ ಕುಲಕರ್ಣಿ, ಅಂಜನಾ ಶೆಣೈ, ನಾಗಶಯನ, ಶಿವಕುಮಾರ್ ಮಹಾಂತ್, ಶ್ರೀನಿವಾಸ ಭಾಗ್ವತ್, ರಶ್ಮಿ ರಾವ್, ಸುಮನ್ ಕಡೇಕಾರ್, ವಿನೀತ್ ರಾಣಾಪೂರ್ ಸೇರಿ ಹಲವು ಕಲಾವಿದರು ಭಾಗವಹಿಸಲಿದ್ದಾರೆ.
ಶಾಸ್ತ್ರೀಯ ಸಂಗೀತ ಉತ್ಸವ
ಬೆಂಗಳೂರು: ಭಾರತೀಯ ಸಾಮಗಾನ ಸಭಾ ಫೆ.5ರಿಂದ ಫೆ.8ರವರೆಗೆ ‘ಪುರಾಣ ಗೀತಂ’ ಶೀರ್ಷಿಕೆಯಡಿ 17ನೇ ಭಾರತೀಯ ಶಾಸ್ತ್ರೀಯ ಸಂಗೀತ ಉತ್ಸವವನ್ನು ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿದೆ.
ಪ್ರತಿನಿತ್ಯ ಸಂಜೆ 5 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ. ಧನ್ಯ ದಿನೇಶ್ ರುದ್ರಪಟ್ಟಣಂ, ಶಿವಶ್ರೀ ಸ್ಕಂದಪ್ರಸಾದ್, ಅರ್ಚನಾ ಸಮನ್ವಿ, ಸಂದೀಪ್ ನಾರಾಯಣ್, ಹರಿಶಂಕರ್ ಕೆ.ಎಸ್., ಅಪೂರ್ವ ಕೃಷ್ಣ ತಂಡ, ರಂಜನಿ ಗಾಯತ್ರಿ ಭಾಗವಹಿಸಲಿದ್ದಾರೆ.
ಸಂಗೀತ ಸಂವಾದ
ಬೆಂಗಳೂರು: ಪಂಚಮ್ ನಿಷಾದ್ ಸಂಸ್ಥೆಯು ‘ತುಕಾರಾಮ್ ಹೇಳೆ ಕಬೀರ’ ಶೀರ್ಷಿಕೆಯಡಿ ಫೆ.1ರಂದು ಸಂಜೆ 5.30ಕ್ಕೆ ಚೌಡಯ್ಯ ಸ್ಮಾರಕ ಭವನದಲ್ಲಿ ಸಂಗೀತ ಸಂವಾದ ಹಮ್ಮಿಕೊಂಡಿದೆ.
ಜಯತೀರ್ಥ ಮೇವುಂಡಿ ಅವರು ಸಂತ ತುಕಾರಾಮ ಅವರ ಆತ್ಮಸ್ಪರ್ಶಿ ಅಭಂಗವಾಣಿ ಹಾಡಲಿದ್ದಾರೆ. ಭುವನೇಶ್ ಕೋಮಕಲಿ ಅವರು ಕಬೀರವಾಣಿಯನ್ನು ಪ್ರಸ್ತುತಪಡಿಸಲಿದ್ದಾರೆ. ಧನಶ್ರೀ ಲೇಲೆ ಅವರು ವಿಷಯ ನಿರೂಪಿಸಲಿದ್ದಾರೆ.
ಕಲಾವಿದರಾದ ಮಂದಾರ್ ಪುರಾಣಿಕ್, ಜ್ಞಾನೇಶ್ವರ ಸೋನವಾಣೆ, ಸುಖದ್ ಮುಂಡೆ, ಸುನಿಲ್ ಕುಮಾರ್, ಸೂರ್ಯಕಾಂತ್ ಸರ್ವೆ ಅವರು ಸಹ ಕಲಾವಿದರಾಗಿ ಸಂಗೀತ ಕಾರ್ಯಕ್ರಮಕ್ಕೆ ಸಾಥ್ ನೀಡಲಿದ್ದಾರೆ. ಟಿಕೆಟ್‌ಗಳು ಬುಕ್ ಮೈ ಶೋದಲ್ಲಿ ಲಭ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.