ಅಮಾನತು
ಬೆಂಗಳೂರು: ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಮಾಡಿ ಸ್ಟಿಕರ್ ಅಂಟಿಸುವ ಕರ್ತವ್ಯದಲ್ಲಿ ಲೋಪ ಎಸಗಿರುವ ಆರೋಪದಡಿ ಪಶ್ಚಿಮ ವಲಯದ ಗೋವಿಂದರಾಜನಗರ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಮೌಲ್ಯಮಾಪಕ ಹನುಮಂತರಾಜು ಅವರನ್ನು ಅಮಾನತು ಮಾಡಲಾಗಿದೆ.
ಸಮೀಕ್ಷೆ ಮಾಡದಿರುವುದು ಮತ್ತು ಸ್ಟಿಕ್ಕರ್ ಅಂಟಿಸದೇ ಇರುವುದು ಕಂಡು ಬಂದಿದೆ. ಕರ್ತವ್ಯ ನಿರ್ವಹಿಸಲು ವಿಫಲಾಗಿರುವುದರಿಂದ ಅವರನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿಕೊಂಡು ಪಶ್ಚಿಮ ವಲಯ ಆಯುಕ್ತರು ಮಾನತು ಮಾಡಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.