ADVERTISEMENT

ಇದೇ 26ರಿಂದ ವಿಜ್ಞಾನ ಸಪ್ತಾಹ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 16:20 IST
Last Updated 21 ಫೆಬ್ರುವರಿ 2022, 16:20 IST

ಬೆಂಗಳೂರು: ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಭಾರತೀಯ ವಿಜ್ಞಾನಗಳ ಅಕಾಡೆಮಿಯ (ಐಎಎಸ್‌)ದಿ ಅಕಾಡೆಮಿ ಟ್ರಸ್ಟ್‌ ಹಾಗೂ ಸೀಡ್‌ ಟು ಸಾ‍ಪ್ಲಿಂಗ್ ಎಜುಕೇಷನ್ ಸಂಸ್ಥೆಗಳ ಸಹಯೋಗದಲ್ಲಿ ‘ವಿಜ್ಞಾನ ಸಪ್ತಾಹ’ ಕಾರ್ಯಕ್ರಮವನ್ನುಫೆಬ್ರುವರಿ 26ರಿಂದ ಮಾರ್ಚ್‌ 6ರವರೆಗೆ ಆನ್‌ಲೈನ್‌ ಮೂಲಕ ಹಮ್ಮಿಕೊಳ್ಳಲಾಗಿದೆ.

ಸೋಮವಾರ ಆನ್‌ಲೈನ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಭಾರತೀಯ ವಿಜ್ಞಾನಗಳ ಅಕಾಡೆಮಿಯ ಪ್ರೊ.ತೀರ್ಥಂಕರ ಭಟ್ಟಾಚಾರ್ಯ,‘ಶಾಲೆಗಳು ಪರೀಕ್ಷೆಗಳಿಗೆ ಸಜ್ಜಾಗಿವೆ.ವಿಜ್ಞಾನ ಮತ್ತು ಗಣಿತದ ಕೌಶಲಗಳನ್ನು ಪರಿಚಯಿಸುವುದು ಸಪ್ತಾಹದ ಪ್ರಮುಖ ವಿಷಯ’ ಎಂದರು.

ಸೀಡ್‌ಟುಸಾಪ್ಲಿಂಗ್‌ ಎಜುಕೇಷನ್ ಸಂಸ್ಥೆಯ ನಿರ್ದೇಶಕ ಪಂಕಜ್ ಜೈನ್, ‘ಮಕ್ಕಳಿಗೆ ವಿಜ್ಞಾನದ ಪ್ರಕ್ರಿಯೆಯನ್ನು ಆನಂದಿಸಲು ಅವಕಾಶ ಮಾಡಿಕೊಡುವುದು ಹಾಗೂ ಅನ್ವೇಷಿಸಲು ಮುಕ್ತ ವಾತಾವರಣ ನಿರ್ಮಿಸುವ ಉದ್ದೇಶದಿಂದ ವಿಶೇಷ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ’ ಎಂದು ಹೇಳಿದರು.

ADVERTISEMENT

ಐಎಎಸ್‌ ಕೌನ್ಸಿಲ್‌ನ ಅಧ್ಯಕ್ಷ ಪ್ರೊ.ಉಮೇಶ್‌ ವಿ.ವಾಗ್ಮರೆ ಅವರು ಫೆ.26ರಂದು ಸಪ್ತಾಹಕ್ಕೆ ಚಾಲನೆ ನೀಡಲಿದ್ದಾರೆ. ಪ್ರತಿದಿನ ಸಂಜೆ 4.30ರಿಂದ 6 ಗಂಟೆಯವರೆಗೆ ಚರ್ಚೆಗಳು ನಡೆಯಲಿವೆ. ದೇಶದ ಪ್ರಮುಖ ವಿಜ್ಞಾನಿಗಳು ಮಾತನಾಡಲಿದ್ದಾರೆ.

ಸರಳ ಮತ್ತು ಸುಲಭವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡುವಿದ್ಯಾರ್ಥಿಗಳು ಗಣಿತಮತ್ತುವಿಜ್ಞಾನದ ಪರಿಶೋಧನೆಗಳನ್ನು ನಡೆಸುವ ಬಗ್ಗೆ ಚರ್ಚೆಗಳು ನಡೆಯಲಿವೆ. ಶಿಕ್ಷಕರಿಗೆ ‘ವಿಜ್ಞಾನ ಮತ್ತು ಗಣಿತ ತರಗತಿಗಳನ್ನು ಸಂತೋಷದಾಯಕವಾಗಿ ಮಾಡುವುದುಹೇಗೆ?’ ಕುರಿತು ಸಂವಾದ ಆಯೋಜಿಸಲಾಗಿದೆ.

ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ‘ಕ್ವೆಸ್ಟ್‌–ಫೆಸ್ಟ್‌’ ಸ್ಪರ್ಧೆಯೂ ನಡೆಯಲಿದೆ.ವಿಜ್ಞಾನ ಮತ್ತು ಗಣಿತ ಶಿಕ್ಷಕರ ಆಯ್ದ ಗುಂಪಿಗೆ 12 ವಾರಗಳ ಅವಧಿಯ ಸರ್ಟಿಫಿಕೇಟ್‌ ಕೋರ್ಸ್ ಇರಲಿದೆ.

‘ವಿಜ್ಞಾನ ವಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರುias.ac.in ಅಥವಾs2seducation.com ವೆಬ್‌ಸೈಟ್‌ಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು. ವಾರವಿಡೀ ನಡೆಯುವ ಕಾರ್ಯಕ್ರಮಗಳನ್ನು ಆನ್‌ಲೈನ್‌ ವೇದಿಕೆಗಳಲ್ಲಿ ವೀಕ್ಷಿಸಬಹುದು’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.