ADVERTISEMENT

ಹಕ್ಕುಚ್ಯುತಿ ತನಿಖೆಗೆ ವಹಿಸಿದ ಪರಿಷತ್

ವಿಧಾನಸೌಧದ ಎದುರು ನೆಹರೂ ಪ್ರತಿಮೆ ಮರು ಪ್ರತಿಷ್ಠಾಪನೆ ವಿಳಂಬ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 18:48 IST
Last Updated 2 ಫೆಬ್ರುವರಿ 2021, 18:48 IST

ಬೆಂಗಳೂರು: ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಪ್ರತಿಮೆ ವಿಧಾನಸೌಧ ಆವರಣದಲ್ಲಿ ಮರು ಸ್ಥಾಪಿಸುವ ವಿಚಾರದಲ್ಲಿ ಸರ್ಕಾರ ಮಾತು ತಪ್ಪಿದೆ ಎಂದು‌ ಕಾಂಗ್ರೆಸ್ ಸದಸ್ಯ ಕೆ. ಗೋವಿಂದರಾಜ್ ವಿಧಾನ ಪರಿಷತ್‌ನಲ್ಲಿ ಹಕ್ಕುಚ್ಯುತಿ ಮಂಡಿಸಿದರು.

‘ನಮ್ಮ ಮೆಟ್ರೊ ಕಾಮಗಾರಿ ಸಂದರ್ಭದಲ್ಲಿ ನೆಹರೂ ಅವರ ಪ್ರತಿಮೆಯನ್ನು ಮೂಲಸ್ಥಳದಿಂದ ಬೇರೆಗೆ ಸ್ಥಳಾಂತರಿಸಲಾಗಿತ್ತು. ಕಾಮಗಾರಿ ಮುಗಿದು ವರ್ಷಗಳೇ ಆಗಿವೆ. ಪ್ರತಿಮೆಯನ್ನು 2020ರ ನವೆಂಬರ್‌ 14ರೊಳಗೆ ಮೂಲಸ್ಥಳಕ್ಕೆ ಸ್ಥಳಾಂತರಿಸುವುದಾಗಿ ಕಳೆದ ಅಧಿವೇಶನದಲ್ಲಿಯೇ ಸರ್ಕಾರ ಹೇಳಿತ್ತು. ಈವರೆಗೆ ಆ ಕೆಲಸ ಆಗಿಲ್ಲ. ಸದನದಲ್ಲಿ ಕೊಟ್ಟ ಭರವಸೆ ಈಡೇರಿಸಿದೆ ಹಕ್ಕುಚ್ಯುತಿ ಉಂಟು ಮಾಡಲಾಗಿದೆ’ ಎಂದು ಅವರು ಆರೋಪಿಸಿದರು.

ಈ ವಿಚಾರವನ್ನು ಹಕ್ಕು ಬಾಧ್ಯತಾ ಸಮಿತಿಗೆ ವಹಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಹಕ್ಕುಬಾಧ್ಯತಾ ಸಮಿತಿಗೆ ವಹಿಸುವುದಾಗಿ ಸಭಾಪತಿ ಭರವಸೆ ನೀಡಿದರು. ಇದಕ್ಕೆ ಅಗತ್ಯವಿರುವ ಮಾಹಿತಿಗಾಗಿ ಕಲಾಪದ ದಾಖಲೆ ಇಲ್ಲವೇ ಮಾಧ್ಯಮಗಳ ವರದಿ ಆಧರಿಸಿ ಕೂಲಂಕಷ ತನಿಖೆ ನಡೆಸಿ ಎಂದು ಸೂಚಿಸಿ, ಕಲಾಪವನ್ನು ಬುಧವಾರ ಬೆಳಿಗ್ಗೆ 11ಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.