ADVERTISEMENT

ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿಗೆ ಆನೇಕಲ್‌ನ 7 ಸದಸ್ಯರು ಆಯ್ಕೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 21:09 IST
Last Updated 4 ಫೆಬ್ರುವರಿ 2026, 21:09 IST
ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಆನೇಕಲ್‌ ತಾಲ್ಲೂಕಿನ ಏಳು ಮಂದಿ ಸದಸ್ಯರಾಗಿ ಆಯ್ಕೆಯಾದರು
ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಆನೇಕಲ್‌ ತಾಲ್ಲೂಕಿನ ಏಳು ಮಂದಿ ಸದಸ್ಯರಾಗಿ ಆಯ್ಕೆಯಾದರು   

ಆನೇಕಲ್: ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಆನೇಕಲ್‌ ತಾಲ್ಲೂಕಿನ ಏಳು ಮಂದಿ ಜಿಲ್ಲಾ ಯೋಜನಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿಗೆ ಬುಧವಾರ ನಡೆದ ಚುನಾವಣೆ ನಡೆಯಿತು.

ಹೆಬ್ಬಗೋಡಿ ನಗರಸಭೆ, ಚಂದಾಪುರ ಮತ್ತು ಜಿಗಣಿ ಪುರಸಭೆಯ ಸದಸ್ಯರು ಮತದಾರರಾಗಿದ್ದರು. ಒಟ್ಟು 77 ಮತಗಳು ಯೋಜನಾ ಸಮಿತಿಯ ಚುನಾವಣೆಯಲ್ಲಿ ಚಲಾವಣೆಯಾದ್ದವು. ಈ ಪೈಕಿ ಜಿಗಣಿ ಪುರಸಭೆ ಸದಸ್ಯ ಜಿಗಣಿ ಪುನೀತ್‌ ಅವರು 51 ಮತ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ.

ADVERTISEMENT

ಹೆಬ್ಬಗೋಡಿ ನಗರಸಭೆಯ ಉಪಾಧ್ಯಕ್ಷೆ ಸುಜಾತ.ಕೆ.ಪಿ.ರಾಜು, ಚಂದಾಪುರ ಪುರಸಭೆ ಸದಸ್ಯ ಉಮೇಶ್‌ ಅವರು ತಲಾ 50 ಮತ, ಎಚ್‌.ಆರ್‌.ರಮೇಶ್‌ 49 ಮತ, ಚಂದಾಪುರದ ವೆಂಕಟಸ್ವಾಮಿ 48 ಮತ, ಶ್ರೀನಿವಾಸರೆಡ್ಡಿ 47 ಮತ, ನವೀನ್‌ 46 ಮತ ಪಡೆಯುವ ಮೂಲಕ ಜಿಲ್ಲಾ ಯೋಜನಾ ಸಮಿತಿ ಸದಸ್ಯರಾಗಿ ಚುನಾಯಿತರಾಗಿದ್ದಾರೆ.

ಬಿಜೆಪಿ ಆನೇಕಲ್‌ ಅಧ್ಯಕ್ಷ ಎಸ್‌.ಆರ್‌.ಟಿ.ಅಶೋಕ್‌ ರೆಡ್ಡಿ, ಮುಖಂಡರಾದ ಹರೀಶ್‌ ರೆಡ್ಡಿ, ಸೋಮಶೇಖರರೆಡ್ಡಿ, ಜಯರಾಮ್‌, ಸೌಮ್ಯ, ನಾರಾಯಣಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.