ADVERTISEMENT

ಶಿವಗಂಗಾ, ಕವಿತಾ ರೈ, ನಂದಿನಿಗೆ ‘ಶಂಕರಮ್ಮ ಬಳಿಗಾರ್’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 15:59 IST
Last Updated 14 ಜೂನ್ 2025, 15:59 IST
<div class="paragraphs"><p>ಶಿವಗಂಗಾ ರುಮ್ಮಾ</p></div>

ಶಿವಗಂಗಾ ರುಮ್ಮಾ

   

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ ನೀಡುವ ‘ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್’ ಪ್ರಶಸ್ತಿಗೆ ಲೇಖಕಿಯರಾದ ಶಿವಗಂಗಾ ರುಮ್ಮಾ, ಕವಿತಾ ರೈ ಹಾಗೂ ರೈತ ನಾಯಕಿ ನಂದಿನಿ ಜಯರಾಮ್ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ತಲಾ ₹10 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಹಾಗೂ ಅವರ ಸಹೋದರ ಎಸ್.ಪಿ. ಬಳಿಗಾರ್ ಅವರು ಸಂಘದಲ್ಲಿ ಈ ದತ್ತಿ ಪ್ರಶಸ್ತಿ ಸ್ಥಾಪಿಸಿದ್ದು, ಗದ್ಯ ಸಾಹಿತ್ಯ, ಕಾವ್ಯ ಪ್ರಕಾರ ಹಾಗೂ ಸಮಾಜ ಸೇವೆ ಕ್ಷೇತ್ರವನ್ನು ಪರಿಗಣಿಸಲಾಗುತ್ತದೆ.

ADVERTISEMENT

ಇದೇ 22ರಂದು ನಗರದ ಗಾಂಧಿ ಭವನದಲ್ಲಿ ಪ‍್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಮಲ್ಲಿಕಾ ಘಂಟಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕವಿತಾ ರೈ
ನಂದಿನಿ ಜಯರಾಮ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.