ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಂದ್ರೆ ಬಿಡಿಎ ನಿರ್ಮಿಸಲು ಉದ್ದೇಶಿಸಿರುವ ಎರಡನೇ ಅತಿ ದೊಡ್ಡ ಯೋಜನೆ ಡಾ.ಶಿವರಾಮ ಕಾರಂತ ಬಡಾವಣೆ. ಇದಕ್ಕೆ ಭೂಮಿ ನೀಡಿದರೆ ಗ್ರಾಮಸ್ಥರ ಜೀವನವೂ ಸುಧಾರಿಸುತ್ತದೆ ಮತ್ತು ಸಿಲಿಕಾನ್ ಸಿಟಿ ಅಭಿವೃದ್ಧಿಗೆ ಅಗತ್ಯ ಆದಾಯವೂ ಬರುತ್ತದೆ ಎಂಬ ಕಾರಣ ನೀಡಿ ಪ್ರಾಧಿಕಾರ ಈ ಯೋಜನೆ ಕೈಗೆತ್ತಿಕೊಂಡಿದೆ. ಇದಕ್ಕಾಗಿ ಬೆಂಗಳೂರಿನ ರಾಮಗೊಂಡನಹಳ್ಳಿ, ಸೋಮಶೆಟ್ಟಿಹಳ್ಳಿ, ಕೆಂಪಾಪುರ, ಆವಲಹಳ್ಳಿ, ಹಾರೋಹಳ್ಳಿ ಸೇರಿದಂತೆ 17 ಹಳ್ಳಿಗಳ ಒಟ್ಟು 3,546 ಎಕರೆ ಸ್ವಾಧೀನ ಪಡಿಸಿಕೊಂಡಿದೆ, ಈ ಯೋಜನೆ ವಿರುದ್ಧ ರೈತರು ಸಿಡಿದೆದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.