ADVERTISEMENT

ಕಾಚರಕನಹಳ್ಳಿ: 75 ನಿವೃತ್ತ ಯೋಧರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 1:27 IST
Last Updated 16 ಆಗಸ್ಟ್ 2021, 1:27 IST
ನಿವೃತ್ತ ಸೇನಾ ಸಿಬ್ಬಂದಿಯನ್ನು ಸಂಸದ ಪಿ.ಸಿ.ಮೋಹನ್ ಸನ್ಮಾನಿಸಿದರು. ಪದ್ಮನಾಭರೆಡ್ಡಿ, ಕಲ್ಯಾಣನಗರ ನಾಗರಿಕರ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಉತ್ತಪ್ಪ, ಪೊಲೀಸ್ ಅಧಿಕಾರಿ ಸತೀಶ್, ಮುಖಂಡರಾದ ಎಂ.ಎನ್.ರೆಡ್ಡಿ, ಕೆ.ಪಿ.ಮೂರ್ತಿ ಹಾಗೂ ಇತರರು ಇದ್ದರು.
ನಿವೃತ್ತ ಸೇನಾ ಸಿಬ್ಬಂದಿಯನ್ನು ಸಂಸದ ಪಿ.ಸಿ.ಮೋಹನ್ ಸನ್ಮಾನಿಸಿದರು. ಪದ್ಮನಾಭರೆಡ್ಡಿ, ಕಲ್ಯಾಣನಗರ ನಾಗರಿಕರ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಉತ್ತಪ್ಪ, ಪೊಲೀಸ್ ಅಧಿಕಾರಿ ಸತೀಶ್, ಮುಖಂಡರಾದ ಎಂ.ಎನ್.ರೆಡ್ಡಿ, ಕೆ.ಪಿ.ಮೂರ್ತಿ ಹಾಗೂ ಇತರರು ಇದ್ದರು.   

ಕೆ.ಆರ್.ಪುರ: ‘ದೇಶ ಸುಭದ್ರವಾಗಿರಲು ಸೈನಿಕರ ಪಾತ್ರ ಮಹತ್ವದ್ದು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸೈನಿಕರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು’ ಎಂದು ಸಂಸದ ಪಿ.ಸಿ‌.ಮೋಹನ್ ತಿಳಿಸಿದರು.

ಕಲ್ಯಾಣನಗರ ನಾಗರಿಕರ ಸಾಂಸ್ಕೃತಿಕ ವೇದಿಕೆ ವತಿಯಿಂದಕಾಚರಕನಹಳ್ಳಿಯಲ್ಲಿ ಭಾನುವಾರ ನಡೆದ ಸ್ವಾತಂತ್ರ್ಯ ದಿನ ಹಾಗೂ ನಿವೃತ್ತ ಸೇನಾ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅನೇಕ ಮಹನೀಯರ ಪ್ರಾಣತ್ಯಾಗದಿಂದ ದೇಶ ಸುಭದ್ರವಾಗಿದೆ. ನಮ್ಮ ಮೇಲೆ ಹಿಡಿತ ಸಾಧಿಸಿದ್ದ ಬ್ರಿಟಿಷರಿಂದ ಸ್ವತಂತ್ರಗೊಂಡ ದಿನವಿದು.ದೇಶದ ಜನರ ರಕ್ಷಣೆಗಾಗಿ ಸೈನಿಕರು ತಮ್ಮ ಪ್ರಾಣದ ಹಂಗು ತೊರೆದು, ಕಾಯುತ್ತಿದ್ದಾರೆ. ಅವರನ್ನು ಸನ್ಮಾನಿಸುವುದು ಶ್ಲಾಘನೀಯ’ ಎಂದರು.

ADVERTISEMENT

ಬಿಜೆಪಿ ಮುಖಂಡ ಪದ್ಮನಾಭರೆಡ್ಡಿ,‘ಕಾಚರಕನಹಳ್ಳಿಯಲ್ಲಿ ಯೋಧರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಪರಮವೀರ ಚಕ್ರ ಪ್ರಶಸ್ತಿ ಪಡೆದ ಲೆಫ್ಟಿನೆಂಟ್ ಕರ್ನಲ್ ಬಿ.ಎಸ್.ಗಣಪತಿ ಇದೇ ವಾರ್ಡಿನವರು. ಒಟ್ಟು ಸೇನಾ ವಲಯಗಳಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿರುವ 75 ಮಂದಿಗೆ ಸನ್ಮಾನ ಮಾಡಲಾಯಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.