ಟೋಲ್ ಪ್ಲಾಜಾ
ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ 948ರಲ್ಲಿ ಸೋಮನಹಳ್ಳಿ ಟೋಲ್ ಪ್ಲಾಜಾ ಮೇ 9ರಂದು ಆರಂಭಗೊಳ್ಳಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆ ಅನುಷ್ಠಾನ ಘಟಕ (ಮೈಸೂರು) ಪ್ರಕಟಣೆ ನೀಡಿದೆ.
ಬಿಆರ್‌ಟಿ ಹುಲಿ ಮೀಸಲು ಗಡಿಯಿಂದ ಬೆಂಗಳೂರು ವಿಭಾಗದ ರಸ್ತೆ ಬಳಕೆದಾರರ ಶುಲ್ಕ ಕೇಂದ್ರವನ್ನು ಬೆಂಗಳೂರು ದಕ್ಷಿಣ ತಾಲ್ಲೂಕಿನ ಸೋಮನಹಳ್ಳಿ ಗ್ರಾಮದ ಸಮೀಪ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದೆ.
ಸುಂಕ ವಸೂಲಾತಿ ಕೇಂದ್ರದಿಂದ 20 ಕಿ.ಮೀ. ವ್ಯಾಪ್ತಿಯೊಳಗೆ ವಾಸಿಸುವ ಎಲ್ಲ ವಾಣಿಜ್ಯೇತರ ವಾಹನಗಳಿಗೆ ₹ 350ಕ್ಕೆ ತಿಂಗಳ ಪಾಸ್ ನೀಡಲಾಗುವುದು ಎಂದು ತಿಳಿಸಿದೆ.
ಶುಲ್ಕ ವಿವರ (₹ಗಳಲ್ಲಿ)
ವಾಹನ ಮಾದರಿ;ಏಕಮುಖ ಸಂಚಾರ;ಅದೇ ದಿನ ಮರಳಿ ಬಂದರೆ;ಜಿಲ್ಲೆಯೊಳಗೆ ನೋಂದಣಿಯಾಗಿರುವ ವಾಹನಗಳಿಗೆ;ವಾಣಿಜ್ಯೇತರ ವಾಹನಗಳಿಗೆ ತಿಂಗಳ ಪಾಸ್;ತಿಂಗಳಲ್ಲಿ 50 ಬಾರಿ ಸಂಚಾರದ ಪಾಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.