ADVERTISEMENT

ಕೌಶಲ ತರಬೇತಿ ನೀಡಲು ಕೆಡಿಇಎಂನೊಂದಿಗೆ ಸೋನಾ ಸ್ಟಾರ್ ಇನ್ನೋವೇಶನ್ಸ್ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 15:18 IST
Last Updated 10 ಸೆಪ್ಟೆಂಬರ್ 2025, 15:18 IST
ಜಾಗತಿಕ ಮತ್ತು ಡಿಜಿಟಲ್ ಉದ್ಯಮಗಳಲ್ಲಿ ಉದ್ಯೋಗದ ತರಬೇತಿಗಾಗಿ ಸೋನಾ ಸ್ಟಾರ್ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ (ಕೆಡಿಇಎಂ) ನಡುವೆ ಒಪ್ಪಂದ ನಡೆಯಿತು
ಜಾಗತಿಕ ಮತ್ತು ಡಿಜಿಟಲ್ ಉದ್ಯಮಗಳಲ್ಲಿ ಉದ್ಯೋಗದ ತರಬೇತಿಗಾಗಿ ಸೋನಾ ಸ್ಟಾರ್ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ (ಕೆಡಿಇಎಂ) ನಡುವೆ ಒಪ್ಪಂದ ನಡೆಯಿತು   

ಬೆಂಗಳೂರು: ಭಾರತದ ವ್ಯಾಪಾರ ಸಮೂಹ ಸೋನಾ ವಲ್ಲಿಯಪ್ಪ ಗ್ರೂಪ್‌ನ ಭಾಗವಾಗಿರುವ ಸೋನಾ ಸ್ಟಾರ್ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್, ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ಮತ್ತು ಡಿಜಿಟಲ್ ಉದ್ಯಮದಲ್ಲಿ 3000 ಉದ್ಯೋಗ ಒದಗಿಸುವುದಕ್ಕಾಗಿ ತರಬೇತಿ ನೀಡಲು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ನೊಂದಿಗೆ (ಕೆಡಿಇಎಂ) ಒಪ್ಪಂದ ಮಾಡಿಕೊಂಡಿದೆ.

ಉನ್ನತ ಶಿಕ್ಷಣ ಮತ್ತು ತರಬೇತಿ ಕೇಂದ್ರವಾದ ಸೋನಾ ಸೆಂಟರ್ ಫಾರ್ ಅಡ್ವಾನ್ಸ್‌ಡ್‌ ಲರ್ನಿಂಗ್ ಆ್ಯಂಡ್‌ ಎಂಟರ್‌ಪ್ರೆನ್ಯೂರ್‌ಶಿಪ್‌ನ (ಸ್ಕೇಲ್) ಬಿಡದಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಅಗತ್ಯವಿರುವ ಕೌಶಲ ಒದಗಿಸುವ ತರಬೇತಿ ನೀಡಲಿದೆ. ರಾಜ್ಯದ ಯಾವುದೇ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ತರಬೇತಿ ಪಡೆಯಲು ಅರ್ಹರಾಗಿದ್ದಾರೆ.

ಸಂಸ್ಥೆಯು 2026–27ರಲ್ಲಿ ತನ್ನ ಮೊದಲ ಬ್ಯಾಚ್‌ನಲ್ಲಿ ತುಮಕೂರು,  ಬೆಳಗಾವಿ, ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ ಮತ್ತು ಧಾರವಾಡ ಕ್ಲಸ್ಟರ್‌ಗಳಲ್ಲಿ 500ರಿಂದ 1,000 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಿದೆ ಎಂದು ಸೋನಾ ಸಮೂಹ ಸಂಸ್ಥೆಗಳ ಉಪಾಧ್ಯಕ್ಷ ತ್ಯಾಗು ವಲ್ಲಿಯಪ್ಪ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.