ರಾಜರಾಜೇಶ್ವರಿ ನಗರದ ಕಾಮಾಕ್ಷಿ ಡೆಂಟಲ್ ಕ್ಲಿನಿಕ್‌ನಲ್ಲಿ ದಂತಗಳಿಗೆ ಸಂಬಂಧಿಸಿದ ಎಲ್ಲ ರೀತಿಯ ಚಿಕಿತ್ಸೆಯನ್ನುಒಂದೇ ಭೇಟಿಯಲ್ಲಿ ಪಡೆಯುವ ಅತ್ಯಾಧುನಿಕ ವ್ಯವಸ್ಥೆಗೆ ನಟ ಪುನೀತ್ ರಾಜ್‌ಕುಮಾರ್ ಚಾಲನೆ ನೀಡಿದರು.
ವಿಶ್ವದ ಮುಂಚೂಣಿ ದಂತ ಚಿಕಿತ್ಸಾ ಉಪಕರಣಗಳ ತಯಾರಿಸುವ ಸಂಸ್ಥೆ ಡೆಂಟ್ಸ್‌ಪ್ಲೈ ಸಿರೊನಾ ಮತ್ತು ಕಾಮಾಕ್ಷಿ ಡೆಂಟಲ್‌ನ ಡಾ. ಆಕಾಶ್ ಸುಂದರ್ ಇದೇ ಮೊದಲ ಬಾರಿಗೆ ನಗರಕ್ಕೆ ಇಂಥ ಅತ್ಯಾಧುನಿಕ ಚಿಕಿತ್ಸಾ ಘಟಕವನ್ನು ಪರಿಚಯಿಸುತ್ತಿದ್ದಾರೆ. ಮುಂಚೆ ದಂತ ಚಿಕಿತ್ಸೆಗೆಂದು ಕ್ಲಿನಿಕ್‌ಗಳಿಗೆ ಮೂರು ಅಥವಾ ನಾಲ್ಕು ಬಾರಿ ಭೇಟಿ ನೀಡಬೇಕಿತ್ತು. ಈಗ ಒಂದೇ ಭೇಟಿಯಲ್ಲಿ ಎಲ್ಲ ರೀತಿಯ ಚಿಕಿತ್ಸೆಗಳನ್ನು ಪಡೆಯಲು ಅವಕಾಶ ಮಾಡಿಕೊಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.