ADVERTISEMENT

ವಿಶೇಷ ರೈಲಿಗೆ ಹಸಿರು ನಿಶಾನೆ

ಯಶವಂತಪುರ–ದೆಹಲಿ ನಡುವಿನ ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 20:03 IST
Last Updated 5 ಮಾರ್ಚ್ 2019, 20:03 IST
ಯಶವಂತಪುರ– ದೆಹಲಿ ನಡುವೆ ಸಂಚರಿಸುವ ಯಶವಂತಪುರ–ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ವಿಶೇಷ ರೈಲಿಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಂಗಳವಾರ ಹಸಿರು ನಿಶಾನೆ ತೋರಿಸಿದರು. ಮೇಯರ್‌ ಗಂಗಾಂಬಿಕೆ, ಸಂಸದರಾದ ಕೆ.ಎಚ್‌.ಮುನಿಯಪ್ಪ, ಪಿ.ಸಿ.ಮೋಹನ್‌, ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಆರ್‌.ಎಸ್‌. ಸಕ್ಸೇನಾ ಇದ್ದಾರೆ.   –ಪ್ರಜಾವಾಣಿ ಚಿತ್ರ
ಯಶವಂತಪುರ– ದೆಹಲಿ ನಡುವೆ ಸಂಚರಿಸುವ ಯಶವಂತಪುರ–ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ವಿಶೇಷ ರೈಲಿಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಂಗಳವಾರ ಹಸಿರು ನಿಶಾನೆ ತೋರಿಸಿದರು. ಮೇಯರ್‌ ಗಂಗಾಂಬಿಕೆ, ಸಂಸದರಾದ ಕೆ.ಎಚ್‌.ಮುನಿಯಪ್ಪ, ಪಿ.ಸಿ.ಮೋಹನ್‌, ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಆರ್‌.ಎಸ್‌. ಸಕ್ಸೇನಾ ಇದ್ದಾರೆ.   –ಪ್ರಜಾವಾಣಿ ಚಿತ್ರ   

ಬೆಂಗಳೂರು: ಯಶವಂತಪುರ– ದೆಹಲಿ ನಡುವೆ ಸಂಚರಿಸುವಯಶವಂತಪುರ–ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ವಿಶೇಷ ರೈಲಿಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಂಗಳವಾರ ಹಸಿರು ನಿಶಾನೆ ತೋರಿಸಿದರು.

ಯಶವಂತಪುರದಿಂದ ನೇರವಾಗಿ ದೆಹಲಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಜನರು ಈ ಸೌಲಭ್ಯವನ್ನು ಹೆಚ್ಚು ಬಳಸುವಂತಾಗಬೇಕು ಎಂದು ಸಚಿವರು ಹೇಳಿದರು.

2009ರಿಂದ 2014ರವರೆಗೆ ರೈಲ್ವೆ ಇಲಾಖೆಗೆ ಕೇವಲ ₹ 1,067 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ನೀಡ
ಲಾಗುತ್ತಿತ್ತು. 2014ರಿಂದ 2018ರ ಅವಧಿಗೆ ₹ 2,047 ಕೋಟಿ ಮೊತ್ತವನ್ನು ಮೀಸಲಿಡಲಾಗಿದೆ. 301 ಕಿಲೋ
ಮೀಟರ್‌ ಮಾರ್ಗವನ್ನು ದ್ವಿಪಥ ಮಾಡಲಾಗಿದೆ. ನಾಲ್ಕು ವರ್ಷಗಳಲ್ಲಿ 256 ಕಿಲೋಮೀಟರ್‌ ಹೊಸ ಮಾರ್ಗಗಳ ಕಾಮಗಾರಿ ಆರಂಭವಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ವರ್ಷಕ್ಕೆ 23 ಕಿಲೋಮೀಟರ್‌ಗಳಷ್ಟು ಹೊಸ ರೈಲು ಮಾರ್ಗ ನಿರ್ಮಾಣಗೊಳ್ಳುತ್ತಿತ್ತು. ಈಗ ಅದು 64 ಕಿಲೋಮೀಟರ್‌ಗೆ ಏರಿದೆ ಎಂದರು.

ADVERTISEMENT

ವಿಶೇಷ ರೈಲಿನ ತಾತ್ಕಾಲಿಕ ವೇಳಾಪಟ್ಟಿ: ಮಧ್ಯಾಹ್ನ 12.55ಕ್ಕೆ ಯಶವಂತಪುರದಿಂದ ಹೊರಡಲಿದೆ. ಚಿಕ್ಕಬಳ್ಳಾಪುರ (1.38), ಚಿಂತಾಮಣಿ (2.18), ಕೋಲಾರ (3.08), ಬಂಗಾರಪೇಟೆ (3.38), ಜೋಳರಪೇಟೆ (5.38), ಕಟ್‌ಪಡಿ (6.58), ರೇಣಿಗುಂಟ (10.20), ಗುಡೂರು (ಮಧ್ಯರಾತ್ರಿ 12.10), ವಿಜಯವಾಡ (ನಸುಕಿನ ವೇಳೆ 4.50), ವಾರಂಗಲ್‌ (ಬೆಳಿಗ್ಗೆ 8.30), ಬಾಲರ್‌ಷಾ (ಮಧ್ಯಾಹ್ನ 1), ಚಂದ್ರಪುರ (1.33), ನಾಗ್ಪುರ ( ಸಂಜೆ 4.30), ಇಟಾರ್ಸಿ (ರಾತ್ರಿ 9) ಭೋಪಾಲ್‌ (10.30), ಝಾನ್ಸಿ (ರಾತ್ರಿ 2.40), ಆಗ್ರಾ ಕಂಟೋನ್ಮೆಂಟ್‌ (ಬೆಳಿಗ್ಗೆ 6)

ಸಾಮಾನ್ಯ ದರ್ಜೆ ಪ್ರಯಾಣ ₹485, ಸ್ಲೀಪರ್‌ ದರ್ಜೆಗೆ ₹810, 2 ಟೈರ್‌ ಎಸಿ ಕೋಚ್‌ ₹ 2,155, 3ಟೈರ್‌ ಎಸಿ ಕೋಚ್‌– ₹3,210

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.