ಬೆಂಗಳೂರು: ಮಹಿಳೆಯರ ಮೇಲಾಗುವ ದೌರ್ಜನ್ಯ ಹಾಗೂ ಇತರೆ ವಿಚಾರಕ್ಕೆ ಸಂಬಂಧಪಟ್ಟ ದೂರುಗಳನ್ನು ಸ್ವೀಕರಿಸಿ ಇನ್‌ಸ್ಪೆಕ್ಟರ್ ಅವರಿಗೆ ಮಾಹಿತಿ ನೀಡಲೆಂದು ಪ್ರತಿ ಠಾಣೆಯಲ್ಲೂ ವಿಶೇಷ ಘಟಕ ತೆರೆಯಲು ಸಿದ್ಧತೆ ನಡೆದಿದೆ.
ಲೈಂಗಿಕ ದೌರ್ಜನ್ಯ, ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ ಹಾಗೂ ಇತರೆ ಎಲ್ಲ ದೂರುಗಳನ್ನು ಸ್ವೀಕರಿಸಲು ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.
ಸದ್ಯದ ವ್ಯವಸ್ಥೆಯಲ್ಲಿ ಪುರುಷ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಬಳಿ ಮಹಿಳೆಯರು ದೂರು ಹೇಳಿಕೊಳ್ಳಲು ಹಿಂಜರಿ ಯುತ್ತಿದ್ದಾರೆ. ಇದೇ ಕಾರಣಕ್ಕೆ ಪ್ರತಿ ಠಾಣೆಯಲ್ಲೂ ವಿಶೇಷ ಘಟಕ ತೆರೆಯಲಾಗುತ್ತಿದೆ. ಹೊರಗುತ್ತಿಗೆ ಆಧಾರದಲ್ಲಿ ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಘಟಕದಲ್ಲಿ ಕಾರ್ಯನಿರ್ವಹಣೆ ಮಾಡಿಸಲಾಗುತ್ತದೆ.
‘ನಿತ್ಯವೂ ಠಾಣೆಗೆ ಬರುವ ಮಹಿಳೆಯರನ್ನು ಪ್ರತ್ಯೇಕವಾಗಿ ಮಾತನಾಡಿಸಿ ಅವರ ದೂರು ಗಳನ್ನು ಪಡೆಯುವ ಘಟಕದ ಸಿಬ್ಬಂದಿ, ಆ ದೂರನ್ನು ನೇರವಾಗಿ ಇನ್‌ಸ್ಪೆಕ್ಟರ್ ಕೈಗೆ ನೀಡಲಿದ್ದಾರೆ. ಇದರಿಂದ ಮಹಿಳಾ ಸಂಬಂಧಿ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲು ಸಾಧ್ಯವಾಗಲಿದೆ’ ಎಂದು ಆಡಳಿತ ವಿಭಾಗದ ಡಿಸಿಪಿ ಇಶಾ ಪಂತ್ ಹೇಳಿದರು.
‘ವಿಶೇಷ ಘಟಕದ ಬಗ್ಗೆ ಗೃಹ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದ್ದು, ಅದಕ್ಕೆ ಒಪ್ಪಿಗೆ ಸಿಕ್ಕಿದೆ. ಸದ್ಯದಲ್ಲೇ ಪ್ರಾಯೋಗಿಕವಾಗಿ ಕೆಲ ಠಾಣೆಗಳಲ್ಲಿ ಇದನ್ನು ಆರಂಭಿಸಲಾಗುವುದು. ನಂತರ, ಎಲ್ಲ ಠಾಣೆಗಳಿಗೂ ವಿಸ್ತರಿಸಲಾಗು
ವುದು’ ಎಂದೂ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.