ADVERTISEMENT

ಪೂರ್ಣ ಸಾಮರ್ಥ್ಯದ ವ್ಯಕ್ತಿತ್ವ ರೂಪಿಸಿಕೊಳ್ಳಿ: ಸದ್ಗುರು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 20:21 IST
Last Updated 2 ಫೆಬ್ರುವರಿ 2019, 20:21 IST
ಅಂಡರ್‌ –25 ಯುವ ಸಮಾವೇಶದಲ್ಲಿ ಸದ್ಗುರು ಜಗ್ಗಿ ವಾಸುದೇವ್‌ ಸಂವಾದ ನಡೆಸಿದರು--– ಪ್ರಜಾವಾಣಿ ಚಿತ್ರ
ಅಂಡರ್‌ –25 ಯುವ ಸಮಾವೇಶದಲ್ಲಿ ಸದ್ಗುರು ಜಗ್ಗಿ ವಾಸುದೇವ್‌ ಸಂವಾದ ನಡೆಸಿದರು--– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬಾಳಿನ ಗುರಿಗಳನ್ನು ಇಟ್ಟುಕೊಳ್ಳುವ ಮುನ್ನ ನಮ್ಮ ಪೂರ್ಣ ಸಾಮರ್ಥ್ಯದ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’ ಎಂದು ಈಶ ಫೌಂಡೇಷನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ಹೇಳಿದರು.

ನಗರದ ಜಯಮಹಲ್ ಪ್ಯಾಲೇಸ್ ಹೋಟೆಲ್ ಆವರಣದಲ್ಲಿಅಂಡರ್ – 25 ಯುವಜನರ ಶೃಂಗಸಭೆಯಲ್ಲಿ ಅವರು ಮಾತನಾಡಿದರು.

‘ಮಾನವನಾಗುವುದು ಹೇಗೆ, ಬದುಕಿನಲ್ಲಿ ಸರಿಯಾದ ಆಯ್ಕೆಗಳನ್ನು ಮಾಡುವುದು ಹೇಗೆ, ಕನಸುಗಳನ್ನು ನನಸಾಗಿಸುವ ಬಗೆ ಹೇಗೆ’ ಎಂಬ ಕುರಿತು ಮಾತನಾಡಿದ ಅವರು, ‘ಕನಸಿನಲ್ಲಿ ಕಲ್ಪಿಸಿಕೊಳ್ಳಲೂ ಅಸಾಧ್ಯವಾದದ್ದನ್ನು ಜೀವನದಲ್ಲಿ ಸಾಧಿಸುವಂತಾಗಬೇಕು’ ಎಂದರು.

ADVERTISEMENT

ಹಿಂದಿನ ಮತ್ತು ಇಂದಿನ ಯುವಕರಿಗೂ ಇರುವ ವ್ಯತ್ಯಾಸ ಏನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ತಮ್ಮ ಕಾಲದ ಯುವ ಜನತೆ ತಮ್ಮ ಸಮುದಾಯ, ಸಮಾಜ ಮತ್ತು ಒಟ್ಟಾರೆ ರಾಷ್ಟ್ರದ ಒಳಿತಿಗಾಗಿ ಏನು ಬದಲಾವಣೆ ಮಾಡಬೇಕು ಎಂಬ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದರು. ಇಂದಿನ ಯುವ ಜನತೆ ತಮ್ಮ ವೈಯಕ್ತಿಕ ಜೀವನ ಮತ್ತು ಗುರಿಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.