ADVERTISEMENT

ಅಧ್ಯಾತ್ಮ ಪಯಣದ ಸಂಗೀತ ಇಂದು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 6:52 IST
Last Updated 19 ಫೆಬ್ರುವರಿ 2023, 6:52 IST
ವೈಭವ್ ಜೋಶಿ ಮತ್ತು ದೇವಕಿ ಪಂಡಿತ್
ವೈಭವ್ ಜೋಶಿ ಮತ್ತು ದೇವಕಿ ಪಂಡಿತ್   

ಬೆಂಗಳೂರು: ರಾಗಭಕ್ತಿ ಮ್ಯೂಸಿಕ್‌ ಆ್ಯಂಡ್ ಫಿಲ್ಮ್ಸ್‌ ಮತ್ತು ಪಂಚಮ್ ನಿಷಾದ್‌ನಿಂದ ಫೆ. 19ರಂದು ‘ಏಳು ಸಾಧ್ವಿಯರ ಅಧ್ಯಾತ್ಮ ಪಯಣ’ದ ಸಂಗೀತ ಕಾರ್ಯಕ್ರಮ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಅಂಡಾಲ್ (ತಮಿಳುನಾಡು), ಅಕ್ಕ ಮಹಾದೇವಿ (ಕರ್ನಾಟಕ), ಜನಬಾಯಿ ಮತ್ತು ಮುಕ್ತಾಬಾಯಿ (ಮಹಾರಾಷ್ಟ್ರ), ಗಂಗಾಸತಿ (ಗುಜರಾತ್), ಮೀರಾ ಬಾಯಿ (ರಾಜಸ್ಥಾನ), ಲಲ್ಲೇಶ್ವದ್ವರಿ(ಕಾಶ್ಮೀರ್) ಇವರ ವಚನಗಳನ್ನು ಪ್ರಸ್ತುತಪಡಿಸಲಾಗುತ್ತದೆ. ದೇವಕಿ ಪಂಡಿತ್‌ ಅವರು ಈ ಪರಿಕಲ್ಪನೆಯನ್ನು ಸೃಷ್ಟಿಸಿದ್ದಾರೆ. ಕವಿ ವೈಭವ್ ಜೋಶಿ ಈ ಅಧ್ಯಾತ್ಮ ಸಂಗೀತ ಪಯಣದ ಕಾರ್ಯಕ್ರಮಕ್ಕೆ ಹಿಂದಿಯಲ್ಲಿ ಸಾಹಿತ್ಯ ರಚಿಸಿದ್ದಾರೆ.

ಸಂಗೀತ ಆಯೋಜಕ ಮತ್ತು ಕೀಬೋರ್ಡ್‌ ವಾದಕ ಕಮಲೇಶ್‌ ಭಂಡಕಮ್‌ಕರ್‌, ವಿನಾಯಕ ನೆಟ್ಕೆ (ತಬಲಾ), ನೀಲೇಶ್‌ ಪರಬ್‌ (ಪರ್ಕುಶನ್), ಶ್ರೀಧರ ಪಾರ್ಥಸಾರಥಿ (ಮೃದಂಗ), ಸಾಗರ್ ಸಾಥೆ (ಹಾರ್ಮೋನಿಯಂ), ಅಮರ್ ಓಕ್ (ಕೊಳಲು), ಶೃತಿ ಭಾವೆ (ಪಿಟೀಲು), ಅಮೋಘ್‌ ದಾಂಡೇಕರ್ (ಗಿಟಾರ್), ಚಂದ್ರಕಾಂತ್ ಲಕ್ಷಪತಿ (ರುಬಾಬ್‌) ಮತ್ತು ಸುಸ್ಮಿರತಾ ದವಾಲ್ಕರ್ ಮತ್ತು ಮೀರಾ ನಿಲಾಖೆ ಸಹ ಗಾಯನದಲ್ಲಿ ಇರಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.