ADVERTISEMENT

ದೈಹಿಕವಾಗಿ ಸದೃಢವಾಗಿರಲು ಕ್ರೀಡೆ ಸಹಕಾರಿ: ಬಿ.ಆರ್. ವಾಸುದೇವ್

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 16:01 IST
Last Updated 11 ನವೆಂಬರ್ 2025, 16:01 IST
ಕ್ರೀಡಾಕೂಟದ ವಿಜೇತ ತಂಡಕ್ಕೆ ಕೆ.ಎಂ.ನಾಗರಾಜ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು. ಚಿಕ್ಕಯ್ಯ, ಲಕ್ಮೀಶ್, ವರದಪ್ಪ, ಎ. ಶ್ರೀನಿವಾಸ್, ಶಿವಣ್ಣ, ನೀಲಕಂಠ, ಎನ್.ಹರೀಶ್ ಉಪಸ್ಥಿತರಿದ್ದರು
ಕ್ರೀಡಾಕೂಟದ ವಿಜೇತ ತಂಡಕ್ಕೆ ಕೆ.ಎಂ.ನಾಗರಾಜ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು. ಚಿಕ್ಕಯ್ಯ, ಲಕ್ಮೀಶ್, ವರದಪ್ಪ, ಎ. ಶ್ರೀನಿವಾಸ್, ಶಿವಣ್ಣ, ನೀಲಕಂಠ, ಎನ್.ಹರೀಶ್ ಉಪಸ್ಥಿತರಿದ್ದರು   

ಬೆಂಗಳೂರು: ‘ಮಕ್ಕಳು ಓದುವುದರ ಜೊತೆಗೆ ಮಾನಸಿಕ, ದೈಹಿಕವಾಗಿ ಸದೃಢವಾಗಿರಲು ಕ್ರೀಡೆ ಸಹಕಾರಿ ಆಗಿದೆ’ ಎಂದು ಜಯನಗರ ಕೋ–ಆಪರೇಟಿವ್ ಹೌಸಿಂಗ್ ಸೊಸೈಟಿಯ ಅಧ್ಯಕ್ಷ ಬಿ.ಆರ್. ವಾಸುದೇವ್ ಹೇಳಿದರು.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮುನೇಶ್ವರ ಸ್ವಾಮಿ ದೇವಸ್ಥಾನ ಅಭಿವೃದ್ದಿ ಸಂಘ ಟ್ರಸ್ಟ್ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೆ.ಎಂ. ನಾಗರಾಜ್ ಅವರು ತಮ್ಮೂರಿನ ಜನರಿಗಾಗಿ 20 ವರ್ಷಗಳಿಂದ ಕ್ರೀಡೆ, ಸಾಂಸ್ಕೃತಿಕ ಮತ್ತು ವಿವಿಧ ಕ್ರೀಡಾ ಚಟುವಟಿಕೆ ನಡೆಸಿ ಗ್ರಾಮೀಣ, ಜಾನಪದ ಕಲೆಗಳನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿದ್ದಾರೆ’ ಎಂದು ತಿಳಿಸಿದರು. 

ADVERTISEMENT

ಟ್ರಸ್ಟ್‌ನ ಅಧ್ಯಕ್ಷ ಕೆ.ಎಂ.ನಾಗರಾಜ್ ಮಾತನಾಡಿ ‘ಗ್ರಾಮದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದೇನೆ. ಹಲವು ಶಿಕ್ಷಣ ಸಂಸ್ಥೆಗಳ ಮಾಲೀಕರ ಮನವೊಲಿಸಿ ಬಡವರು, ಪ್ರತಿಭಾವಂತ, ಮಧ್ಯಮ ವರ್ಗದ ಮಕ್ಕಳಿಗೆ ಶಿಕ್ಷಣ ಸಿಗುವಂತೆ ಸಹಾಯ ಮಾಡುತ್ತಿದ್ದೇನೆ’ ಎಂದು ತಿಳಿಸಿದರು. 

ಕಮ್ಯೂನಿಟಿ ಸೆಂಟರ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಚಿಕ್ಕಯ್ಯ, ಬೆಸ್ಕಾಂ ನಿರ್ದೇಶಕ ಲಕ್ಮೀಶ್, ರಾಜ್ಯ ಹಳ್ಳಿಕಾರ ಸಂಘದ ನಿರ್ದೇಶಕರಾದ ವರದಪ್ಪ, ಎ, ಶ್ರೀನಿವಾಸ್, ಶಿವಣ್ಣ, ನೀಲಕಂಠ, ಕಮ್ಯೂನಿಟಿ ಸೆಂಟರ್ ಸಮೂಹ ಸಂಸ್ಥೆಗಳ ಉಪಾಧ್ಯಕ್ಷ ಎನ್. ಹರೀಶ್, ಕೆ.ಎನ್. ರಾಘವೇಂದ್ರ, ಎನ್. ಸುರೇಶ್, ಲೋಕೆಶ್, ಕೇಶವಚಂದ್ರ, ಗಂಗಾಧರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.