ADVERTISEMENT

ಎಸ್‌ಆರ್‌ಎಂ ಎಂಜಿನಿಯರಿಂಗ್‌ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 28 ಮೇ 2021, 21:50 IST
Last Updated 28 ಮೇ 2021, 21:50 IST

ಬೆಂಗಳೂರು: ಎಸ್‌ಆರ್‌ಎಂ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಆಯೋಜಿಸಿದ್ದ ಮೊದಲನೇ ಹಂತದ ಜಾಯಿಂಟ್‌ ಎಂಜಿನಿಯರಿಂಗ್‌ ಪ್ರವೇಶ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಿದೆ.

ಇದೇ ತಿಂಗಳ23 ಮತ್ತು24ರಂದು ಮೂರು ಹಂತಗಳಲ್ಲಿ ಪರೀಕ್ಷೆ ಆಯೋಜಿಸಲಾಗಿತ್ತು. ಮೊದಲ ಹಂತದ ಕೌನ್ಸೆಲಿಂಗ್‌ ಶೀಘ್ರವೇ ಆರಂಭವಾಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಎಸ್‌ಆರ್‌ಎಂ ಸಂಸ್ಥೆಯಎರಡನೇ ಹಂತದಜಾಯಿಂಟ್‌ ಎಂಜಿನಿಯರಿಂಗ್‌ ಪ್ರವೇಶ ಪರೀಕ್ಷೆಯು ಜುಲೈ 25 ಮತ್ತು26ರಂದು ನಿಗದಿಯಾಗಿದೆ. ಜುಲೈ 20ರವರೆಗೂ ಅರ್ಜಿಗಳು ಲಭ್ಯವಿರಲಿವೆ. ಈ ಪರೀಕ್ಷೆಯ ಫಲಿತಾಂಶವನ್ನು ಅದೇ ತಿಂಗಳ 29ರಂದು ಪ್ರಕಟಿಸಲಾಗುತ್ತದೆ.

ADVERTISEMENT

ಈ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಡೆಯುವ ರ‍್ಯಾಂಕ್‌ಗಳ ಆಧಾರದಲ್ಲಿ ಅವರಿಗೆಎಸ್‌ಆರ್‌ಎಂಐಎಸ್‌ಟಿ ಚೆನ್ನೈ, ಎಸ್‌ಆರ್‌ಎಂ ವಿಶ್ವವಿದ್ಯಾಲಯ ಸೋನೆಪತ್‌, ಹರಿಯಾಣ ಹಾಗೂ ಎಸ್‌ಆರ್‌ಎಂ ವಿಶ್ವವಿದ್ಯಾಲಯ ಆಂಧ್ರಪ್ರದೇಶದಲ್ಲಿ ಬಿ.ಟೆಕ್‌ ಪ್ರವೇಶ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ SRMIST.edu.in ಗೆ ಭೇಟಿ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.