ADVERTISEMENT

ಸುವರ್ಣ ಸಂಭ್ರಮ: ವೈದ್ಯ ಸಾಧಕರಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 21:41 IST
Last Updated 7 ಡಿಸೆಂಬರ್ 2025, 21:41 IST
<div class="paragraphs"><p>ಸಮಾರಂಭದಲ್ಲಿ ಲಿಸ್ಸಿ ಚಾಕೊ, ಎಂ.ಆರ್.ಜೈಶಂಕರ್ ಹಾಗೂ ಕುಲಂಡೈ ಫ್ರಾನ್ಸಿಸ್ ಅವರನ್ನು ಗೌರವಿಸಲಾಯಿತು. </p></div>

ಸಮಾರಂಭದಲ್ಲಿ ಲಿಸ್ಸಿ ಚಾಕೊ, ಎಂ.ಆರ್.ಜೈಶಂಕರ್ ಹಾಗೂ ಕುಲಂಡೈ ಫ್ರಾನ್ಸಿಸ್ ಅವರನ್ನು ಗೌರವಿಸಲಾಯಿತು.

   

ಪ್ರಜಾವಾಣಿ ಚಿತ್ರ

ಬೆಂಗಳೂರು: ಸೇಂಟ್‌ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸಿದ ವೈದ್ಯ ಸಾಧಕರನ್ನು ಗೌರವಿಸಲಾಯಿತು. 

ADVERTISEMENT

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ‘ವಾಣಿಜ್ಯೀಕರಣ ಅಥವಾ ಕಾರ್ಪೊರೇಟೀಕರಣವಿಲ್ಲದೆ ಆರೋಗ್ಯ ಸೇವೆ ನೀಡುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೂಲಕ ಸಂಸ್ಥೆಯು ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ. ಸಂಶೋಧನೆಗಳ ಮೂಲಕ ಸಾರ್ವಜನಿಕ ಆರೋಗ್ಯ ಬಲವರ್ಧನೆಗೆ ಶ್ರಮಿಸುತ್ತಿದೆ’ ಎಂದು ಹೇಳಿದರು. 

ಸೇಂಟ್‌ ಜಾನ್ಸ್ ವೈದ್ಯಕೀಯ ಕಾಲೀಜಿನ ಡೀನ್ ಡಾ. ಜಾರ್ಜ್ ಡಿಸೋಜಾ, ನರವಿಜ್ಞಾನ ವಿಭಾಗದ ಡಾ.ಎ. ಮೋಹನ್, ಜನರಲ್ ಮೆಡಿಸಿನ್ ವಿಭಾಗದ ಡಾ. ಚಂದ್ರಮೌಳಿ ಕೆ.ಎಸ್., ಪಾಸ್ಟಿಕ್ ಸರ್ಜರಿ ವಿಭಾಗದ ಡಾ. ವಿಜಯ್ ಜೋಸೆಫ್ ಹಾಗೂ ಕುಟುಂಬ ವೈದ್ಯಕೀಯ ವಿಭಾಗದ ಡಾ.ರವೀಂದ್ರನ್ ಜಿ.ಡಿ. ಅವರನ್ನು ಗೌರವಿಸಲಾಯಿತು. 

ಸೇಂಟ್‌ ಜಾನ್ಸ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಡುಗೆ ನೀಡಿದ ಸೇಂಟ್‌ ಮಾರ್ಥಾಸ್ ಆಸ್ಪತ್ರೆಯ ಅಧ್ಯಕ್ಷೆ ಲಿಸ್ಸಿ ಚಾಕೊ, ಬ್ರಿಗೇಡ್ ಗ್ರೂಪ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಎಂ.ಆರ್.ಜೈಶಂಕರ್ ಹಾಗೂ ಸಾಮಾಜಿಕ ಕಾರ್ಯಕರ್ತ ಕುಲಂಡೈ ಫ್ರಾನ್ಸಿಸ್ ಅವರನ್ನು ಗೌರವಿಸಲಾಯಿತು.

ತ್ರಿಶೂರ್‌ನ ಆರ್ಚ್ ಬಿಷಪ್ ಆ್ಯಂಡ್ರೋಸ್‌ ಟಿ., ಬೆಂಗಳೂರಿನ ಆರ್ಚ್ ಬಿಷಪ್ ಪೀಟರ್ ಮಚಾಡೊ, ರಾಯಪುರ್‌ನ ಆರ್ಚ್ ಬಿಷಪ್ ವಿಕ್ಟರ್ ಹೆನ್ರಿ ಠಾಕೂರ್, ಸೇಂಟ್‌ ಜಾನ್ಸ್ ನ್ಯಾಷನಲ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್‌ನ ನಿರ್ದೇಶಕ ಜೇಸುದಾಸ್ ರಾಜಮಾಣಿಕಂ ಉಪಸ್ಥಿತರಿದ್ದರು.

ಆ್ಯಂಡ್ರೋಸ್‌ ಟಿ., ಪೀಟರ್ ಮಚಾಡೊ, ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ, ವಿಕ್ಟರ್ ಹೆನ್ರಿ ಠಾಕೂರ್, ಜೇಸುದಾಸ್ ರಾಜಮಾಣಿಕಂ ಉಪಸ್ಥಿತರಿದ್ದರು ಸೇಂಟ್‌ ಜಾನ್ಸ್‌ ನ್ಯಾಷನಲ್ ಅಕಾಡೆಮಿ ಆಫ್‌ ಹೆಲ್ತ್‌ ಸೈನ್ಸಸ್‌ ಶುಕ್ರವಾರ ಆಯೋಜಿಸಿದ ಸೇಂಟ್‌ ಜಾನ್ಸ್‌ ಮೆಡಿಕಲ್ ಕಾಲೇಜ್ ಹಾಸ್ಪಿಟಲ್‌ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸೇಂಟ್‌ ಜಾನ್ಸ್‌ ಮೆಡಿಕಲ್ ಕಾಲೇಜ್ ಹಾಸ್ಪಿಟಲ್‌ಗೆ ಶ್ರಮಿಸಿದ ಸೇಂಟ್‌ ಮಾರ್ತಾ ಆಸ್ಪತ್ರೆಯ ಅಧ್ಯಕ್ಷೆ ಸಿಸ್ಟೆರ್ ಲಿಸ್ಸಿ ಚಾಕೋ, ಬ್ರಿಗೇಡ್ ಗ್ರೂಪ್‌ ಕಾರ್ಯನಿರ್ವಾಹಕ ಅಧ್ಯಕ್ಷ ಎಂ.ಆರ್.ಜೈಶಂಕರ್ ಹಾಗೂ ಸಾಮಾಜಿಕ ಕಾರ್ಯಕರ್ತ ಕುಲಂಡೈ ಫ್ರಾನ್ಸಿಸ್ ಅವರನ್ನು ಗೌರವಿಸಲಾಯಿತು . ಅರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಾರಿಗೆ ಸಂಚಾರ ಸಚಿವ ರಾಮಲಿಂಗಾರೆಡ್ಡಿ, ಆರ್ಚ್ ಬಿಷಪ್ ತ್ರಿಶೂರ್ ಆ್ಯಂಡ್ರೋಸ್‌ ಟಿ. ಆರ್ಚ್ ಬಿಷಪ್ ಬೆಂಗಳೂರು ಪೀಟರ್ ಮಚಾಡೊ,ಸಿಬಿಸಿಐ ಸೊಸೈಟಿ ಫಾರ್ ಮೆಡಿಕಲ್ ಎಜುಕೇಶನ್ ಅಧ್ಯಕ್ಷ ರಾಯಪುರ್ ಆರ್ಚ್ ಬಿಷಪ್ ವಿಕ್ಟರ್ ಹೆನ್ರಿ ಠಾಕೂರ್, ಸೇಂಟ್‌ಜಾನ್ಸ್ ನ್ಯಾಶನಲ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ನಿರ್ದೇಶಕ ಜೆಸುದಾಸ್ ರಾಜಮಾಣಿಕಂ ಹಾಗೂ ಇತರರು ಉಪಸ್ಥಿತರಿದ್ದರು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.