ಬೆಂಗಳೂರು: ಪಿಇಎಸ್ ವಿಶ್ವವಿದ್ಯಾಲಯದ 8ನೇ ಸೆಮಿಸ್ಟರ್‌ನ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ತಮ್ಮ ನವೋದ್ಯಮಕ್ಕೆ ‘ಸ್ಟಾರ್ಟ್ ಅಪ್ ಇಂಡಿಯಾ’ದಡಿ ₹30 ಲಕ್ಷ ನೆರವು ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ಓಂಕಾರ್ ಜೋಯಿಸ್, ಅಚಿಂತ್ಯ ಕೃಷ್ಣ ಮತ್ತು ಅನುಪ್ ಪ್ರಕಾಶ್ ಅವರು ‘ಪಾಕೇಟ್‌ಕೋಚ್ ಟೆಕ್ನಾಲಜೀಸ್’ ನವೋದ್ಯಮ ಪ್ರಾರಂಭಿಸಿದ್ದು, ಇದು ಬಾಸ್ಕೆಟ್‌ಬಾಲ್ ಸಂಬಂಧಿತ ನವೋದ್ಯಮವಾಗಿದೆ.
ಐಐಎಂ ಬೆಂಗಳೂರು ಆಯೋಜಿಸಿದ್ದ ಸ್ಪರ್ಧಾತ್ಮಕ ಕ್ಯಾಂಪಸ್ ಸ್ಪರ್ಧೆಯಲ್ಲಿ 30 ಕಾಲೇಜುಗಳ ನವೋದ್ಯಮಗಳು ಭಾಗವಹಿಸಿದ್ದವು. ಹಲವು ಸುತ್ತಿನ ವಿಮರ್ಶೆಗಳ ಬಳಿಕ, ಪಿಇಎಸ್ ವಿಶ್ವವಿದ್ಯಾಲಯದ ನವೋದ್ಯಮವನ್ನು ಆಯ್ಕೆ ಮಾಡಿ, ನೆರವು ಒದಗಿಸಲಾಗಿದೆ.
ವಿದ್ಯಾರ್ಥಿಗಳ ಈ ಆವಿಷ್ಕಾರವನ್ನು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಜವಾಹರ್ ದೊರೆಸ್ವಾಮಿ ಮತ್ತು ಕುಲಪತಿ ಪ್ರೊ.ಜೆ. ಸೂರ್ಯಪ್ರಸಾದ್ ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.