ADVERTISEMENT

ಲಾಕ್‌ಡೌನ್ ಘೋಷಣೆ: ಮದ್ಯದ ಅಂಗಡಿಗಳಿಗೆ ಮುಗಿಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 19:02 IST
Last Updated 13 ಜುಲೈ 2020, 19:02 IST
   

ಬೆಂಗಳೂರು: ಲಾಕ್‌ಡೌನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಮದ್ಯದ ಅಂಗಡಿಗಳಿಗೆ ಜನರು ಸೋಮವಾರ ಮುಗಿಬಿದ್ದರು.

ಲಾಕ್‌ಡೌನ್ ಅವಧಿಯಲ್ಲಿ ಮದ್ಯ ದೊರೆಯುವುದೋ, ಇಲ್ಲವೋ ಎಂಬ ನಿಖರ ಮಾಹಿತಿ ಇಲ್ಲದ ಕಾರಣ ಖರೀದಿ ಮಾಡಿಟ್ಟುಕೊಳ್ಳಲು ಅಂಗಡಿಗಳಿಗೆ ನುಗ್ಗಿದ್ದರು.

ಬೆಳಿಗ್ಗೆಯಿಂದಲೇ ಮದ್ಯದ ಅಂಗಡಿಗಳಲ್ಲಿ ಜನರು ಸಾಲುಗಟ್ಟಿ ನಿಂತಿದ್ದರು. ಬಾಕ್ಸ್‌ಗಟ್ಟಲೆ ಖರೀದಿಸಿ ಕೊಂಡೊಯ್ದರು. ಕರ್ನಾಟಕ ಪಾನೀಯ ನಿಗಮದ ಗೋದಾಮಿನಿಂದಲೂ ಮದ್ಯ ಎಂದಿಗಿಂತ ಹೆಚ್ಚಾಗಿ ಮಾರಾಟವಾಗಿದೆ. ಪ್ರತಿನಿತ್ಯ 2 ಲಕ್ಷ ಬಾಕ್ಸ್ ಮಾರಾಟವಾಗುತ್ತಿದ್ದ ಮದ್ಯ ಸೋಮವಾರ 3 ಲಕ್ಷ ಬಾಕ್ಸ್‌ಗೆ ಏರಿಕೆಯಾಗಿದೆ.

ADVERTISEMENT

ಇರಲಿವೆ ವೈನ್ ಶಾಪ್
ಲಾಕ್‌ಡೌನ್‌ ವೇಳೆ ಮದ್ಯದ ಅಂಗಡಿಗಳನ್ನು ತೆರೆಯಬಹುದು ಎಂದು ಲಾಕ್‌ಡೌನ್ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ ತನಕ ಪಾರ್ಸೆಲ್ ಸೇವೆ ಮಾತ್ರ ಇರುವ ಮದ್ಯದ ಅಂಗಡಿ ತೆರೆಯಲು ಅವಕಾಶ ಇದೆ. ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳನ್ನು ತೆರೆಯಲು ಅವಕಾಶ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.