ADVERTISEMENT

IPL ಬೆಟ್ಟಿಂಗ್‌ ಕುರಿತು ಸ್ಟೇಟಸ್‌: ‘ರೀಲ್ಸ್‌ ಸ್ಟಾರ್‌’ಗಳಿಗೆ ಪೊಲೀಸರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 16:23 IST
Last Updated 8 ಏಪ್ರಿಲ್ 2025, 16:23 IST
ಐಪಿಎಲ್‌ ಬೆಟ್ಟಿಂಗ್‌ (ಸಾಂದರ್ಭಿಕ ಚಿತ್ರ)
ಐಪಿಎಲ್‌ ಬೆಟ್ಟಿಂಗ್‌ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಐಪಿಎಲ್‌ ಬೆಟ್ಟಿಂಗ್‌ ಕುರಿತು ವಾಟ್ಸ್‌ಆ್ಯಪ್‌ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಸ್ಟೇಟಸ್‌ ಹಾಕುತ್ತಿದ್ದ ರೀಲ್ಸ್‌ ಸ್ಟಾರ್‌ಗಳಿಗೆ ಸೈಬರ್ ಅಪರಾಧ ವಿಭಾಗದ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಗೆಲ್ಲುವ ಹಾಗೂ ಸೋಲುವ ತಂಡ ಯಾವುದು ಎಂಬುದಾಗಿ ರೀಲ್ಸ್‌ ಸ್ಟಾರ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸ್ಟೇಟಸ್‌ ಹಾಕುತ್ತಿದ್ದರು. ಅದನ್ನು ಗಮನಿಸಿದ ಸೈಬರ್‌ ಠಾಣೆಯ ಪೊಲೀಸರು, ಅವರನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಟೇಟಸ್ ಹಾಕಿ ಗೆಲ್ಲುವ ಹಾಗೂ ಸೋಲಿನ ಬಗ್ಗೆ ಜನರ ಅಭಿಪ್ರಾಯ ತಿಳಿದುಕೊಳ್ಳುತ್ತಿದ್ದರು. ಬುಕ್ಕಿಗಳು ಕೊಡುತ್ತಿದ್ದ ಸೂಚನೆ ಮೇರೆಗೆ ರೀಲ್ಸ್‌ ಸ್ಟಾರ್‌ಗಳು ಸ್ಟೇಟಸ್‌ ಹಾಕುತ್ತಿದ್ದರು ಎಂಬುದು ಕಂಡುಬಂದಿದೆ. ರೀಲ್ಸ್​ ಸ್ಟಾರ್​ಗಳ ​ಇನ್​ಸ್ಟಾಗ್ರಾಂ ಹಾಗೂ ವಾಟ್ಸ್‌ಆ್ಯಪ್‌ ಸ್ಟೇಟಸ್‌ ಪರಿಶೀಲನೆ ನಡೆಸಿ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಬೆಂಗಳೂರು, ಮಂಗಳೂರು, ಮಂಡ್ಯ, ಹುಬ್ಬಳ್ಳಿಯಲ್ಲೂ ರೀಲ್ಸ್​ ಸ್ಟಾರ್​ಗಳ ವಿಚಾರಣೆ ನಡೆಸಲಾಗಿದೆ. ಇನ್ನು ಮುಂದೆ ಸೋಲು – ಗೆಲುವಿನ ಕುರಿತು ಅಭಿಪ್ರಾಯ ಸಂಗ್ರಹಿಸುವ ಸ್ಟೇಟಸ್‌ ಹಾಕದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.