
ಬೆಂಗಳೂರು: ಉತ್ತರ ವಿಭಾಗದ 13 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳಿಂದ ಜಪ್ತಿ ಮಾಡಿಕೊಂಡಿದ್ದ 57 ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ಹಸ್ತಾಂತರ ಮಾಡಲಾಯಿತು.
₹7.1 ಲಕ್ಷ ಮೌಲ್ಯದ 57 ಮೊಬೈಲ್ ಫೋನ್‌ಗಳನ್ನು ಮಾಲೀಕರಿಗೆ ಉತ್ತರ ವಿಭಾಗದ ಡಿಸಿಪಿ ಬಿ.ಎಸ್.ನೇಮಗೌಡ ಅವರು ಹಸ್ತಾಂತರಿಸಿದರು. ಸಿಇಐಆರ್ ಪೋರ್ಟಲ್ ಸಹಾಯದಿಂದ ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡಲಾಗಿತ್ತು ಎಂದು ಪೊಲೀಸರು ಹೇಳಿದರು.
ಮಲ್ಲೇಶ್ವರ ಠಾಣೆಯ ಪೊಲೀಸರು 2, ಶ್ರೀರಾಮಪುರ 8, ರಾಜಾಜಿನಗರ 5, ಸುಬ್ರಹ್ಮಣ್ಯನಗರ 9, ಮಹಾಲಕ್ಷ್ಮಿಲೇಔಟ್ 4, ನಂದಿನಿಲೇಔಟ್ 10, ಯಶವಂತಪುರ 3, ಆರ್‌ಎಂಸಿ ಯಾರ್ಡ್ 2, ಸಂಜಯನಗರ 5, ಜೆ.ಸಿ. ನಗರ 6, ಹೆಬ್ಬಾಳ ಠಾಣೆಯ ಪೊಲೀಸರು 3 ಮೊಬೈಲ್ ಫೋನ್ ಪತ್ತೆ ಮಾಡಿ ಆರೋಪಿಗಳಿಂದ ವಶಕ್ಕೆ ಪಡೆದುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.