ADVERTISEMENT

ಬೆಂಗಳೂರು: ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 14:41 IST
Last Updated 4 ಜನವರಿ 2024, 14:41 IST
ವಿಶು ಉತ್ತಪ್ಪ
ವಿಶು ಉತ್ತಪ್ಪ   

ಬೆಂಗಳೂರು: ಮನೆಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಿ.ಇ ಮೊದಲ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದ ವಿಶು ಉತ್ತಪ್ಪ (19) ಆತ್ಮಹತ್ಯೆ ಮಾಡಿಕೊಂಡವರು.

‘ನೈಸ್‌ ರಸ್ತೆಯ ಟೋಲ್‌ ಸಮೀಪದ ತಿರುಮಲನಗರದಲ್ಲಿ ಪೋಷಕರ ಜೊತೆಗೆ ವಿಶು ವಾಸವಿದ್ದರು. ಮೂಲತಃ ಕೊಡಗು ಜಿಲ್ಲೆ, ಮಡಿಕೇರಿ ತಾಲ್ಲೂಕಿನ ಮುಕೊಡ್ಲು ಗ್ರಾಮದ ಕೆ.ಡಿ.ತಿಮ್ಮಯ್ಯ ಅವರ ಪುತ್ರ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ತಿಮ್ಮಯ್ಯ ಅವರು ನೈಸ್‌ ಟೋಲ್‌ನಲ್ಲಿ ಸಂಗ್ರಹಣೆಯಾದ ಹಣವನ್ನು ಬ್ಯಾಂಕ್‌ಗೆ ಜಮೆ ಮಾಡುವ ಕೆಲಸವನ್ನು ಕಳೆದ ಏಳು ವರ್ಷದಿಂದ ಮಾಡುತ್ತಿದ್ದರು. ತಂದೆ ಪರವಾನಗಿ ಹೊಂದಿದ ಬಂದೂಕು ಹೊಂದಿದ್ದರು. ತಂದೆ ಹಾಗೂ ತಾಯಿ ಸಾಮಗ್ರಿ ಖರೀದಿಸಲು ಹೊರಕ್ಕೆ ಹೋದ ಸಂದರ್ಭದಲ್ಲಿ ತಂದೆಯ ಬಂದೂಕಿನಿಂದ ಎದೆಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಗುಂಡು ಹಾರಿಸಿಕೊಂಡ ಮೇಲೆ ತಂದೆಗೆ ವಿಶು ಕರೆ ಮಾಡಿ, ನಾನು ಇನ್ಮುಂದೆ ಯಾವುದೇ ತಪ್ಪು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಅನುಮಾನಗೊಂಡ ತಂದೆ ಮನೆಗೆ ಬಂದು ನೋಡುವಷ್ಟರಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು’

‘ಕಳೆದ ನಾಲ್ಕೈದು ದಿನಗಳಿಂದ ಪುತ್ರ ಮೌನವಾಗಿದ್ದ ಎಂದು ತಂದೆ ತಿಳಿಸಿದ್ದಾರೆ. ಕಾಲೇಜು ಬಗ್ಗೆಯೂ ತಂದೆಗೆ ಯಾವುದೇ ಅನುಮಾನ ಇಲ್ಲ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಪೋಷಕರಿಗೆ ಮೃತದೇಹ ಹಸ್ತಾಂತರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.