ADVERTISEMENT

ಬೆಂಗಳೂರು | ಯುವತಿ ವಿಚಾರಕ್ಕೆ ಗಲಾಟೆ: ವಿದ್ಯಾರ್ಥಿಗೆ ಚಾಕು ಇರಿತ; ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 15:57 IST
Last Updated 15 ಅಕ್ಟೋಬರ್ 2025, 15:57 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಯುವತಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗೆ ಚಾಕುವಿನಿಂದ ಇರಿದ ಪ್ರಕರಣ ಸಂಬಂಧ ಆರ್‌.ಟಿ.ನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ADVERTISEMENT

ತಿಮ್ಮಯ್ಯ ಗಾರ್ಡ್‌ನ ನಿವಾಸಿ ವೈಭವ್ ಆರ್ಯನ್ (19) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರ್‌.ಟಿ.ನಗರದ ಮೊದಲ ಬ್ಲಾಕ್‌ನಲ್ಲಿ ಶನಿವಾರ ಈ ಘಟನೆ ನಡೆದಿದ್ದು,  ಪ್ರಭುದೇವ್ ಮತ್ತು ಹೋಟೆಲ್ ಕಾರ್ಮಿಕ ಗಣೇಶ್ ಬಂಧಿತರು.

‘ವೈಭವ್ ಓದುತ್ತಿರುವ ಕಾಲೇಜಿನಲ್ಲೇ ಪಿಯುಸಿ ಓದಿದ್ದ ಪ್ರಭುದೇವ್, ಆಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ವೈಭವ್ ಸ್ನೇಹಿತೆಗೆ ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿ ಪೀಡಿಸುತ್ತಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. ಅಕ್ಟೋಬರ್ 11ರಂದು ತನ್ನ ಸಹಚರನ ಜತೆ ಕಾಲೇಜಿಗೆ ತೆರಳಿದ್ದ ಪ್ರಭುದೇವ್, ಚಾಕುವಿನಿಂದ ಹೊಟ್ಟೆಗೆ ಇರಿದು ಪರಾರಿಯಾಗಿದ್ದ‘ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡಿರುವ ಆರ್ಯನ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು. ಆತನ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.