ADVERTISEMENT

ಶಾಸಕ ಸುರೇಶ್‌ ಕುಮಾರ್‌ಗೆ ಮಾತೃ ವಿಯೋಗ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 0:03 IST
Last Updated 24 ಸೆಪ್ಟೆಂಬರ್ 2025, 0:03 IST
ಸುಶೀಲಮ್ಮ
ಸುಶೀಲಮ್ಮ   

ಬೆಂಗಳೂರು: ಬಸವೇಶ್ವರ ನಗರದ ನಿವಾಸಿ, ನಿವೃತ್ತ ಮುಖ್ಯಶಿಕ್ಷಕಿ ಪಿ.ಸುಶೀಲಮ್ಮ(96)  ಅವರು ಮಂಗಳವಾರ ನಿಧನರಾದರು.

ಅವರಿಗೆ ಪುತ್ರರಾದ, ಶಾಸಕ ಎಸ್‌.ಸುರೇಶ್‌ಕುಮಾರ್ ಹಾಗೂ ಸೊಸೆ, ಪತ್ರಕರ್ತೆ ಕೆ.ಎಚ್‌.ಸಾವಿತ್ರಿ ಇದ್ದಾರೆ. 

ದಾವಣಗೆರೆ ಜಿಲ್ಲೆ ಹರಿಹರದವರಾದ ಸುಶೀಲಮ್ಮ ಅವರು ನಗರದಲ್ಲಿ 35 ವರ್ಷ ಶಿಕ್ಷಕರಾಗಿದ್ದರು. ಶ್ರೀರಾಂಪುರ ಸರ್ಕಾರಿ ಶಾಲೆಯಲ್ಲಿಯೇ ಬಹುಕಾಲ ಕೆಲಸ ಮಾಡಿದ್ದರು. ಗೊರಗುಂಟೆಪಾಳ್ಯ ಸರ್ಕಾರಿ ಶಾಲೆ ಮುಖ್ಯಶಿಕ್ಷಕಿಯಾಗಿ ನಿವೃತ್ತರಾಗಿದ್ದರು.

ADVERTISEMENT

‘ಶಿಕ್ಷಣ ಬಯಸಿ ಬಂದ ಮಕ್ಕಳಿಗೆ ಸುಶೀಲಮ್ಮ ಪ್ರೀತಿಯ ಟೀಚರ್‌ ಆಗಿದ್ದರು. ಹಲವಾರು ಮಕ್ಕಳಿಗೆ ಮನೆಯಲ್ಲಿಯೇ ಊಟ ಹಾಕಿ, ಶಿಕ್ಷಣ ಮುಂದುವರಿಸಲು ಆರ್ಥಿಕ ನೆರವನ್ನು ನೀಡಿದ್ದರು’ ಎಂದು  ವಿದ್ಯಾರ್ಥಿಗಳು ಸ್ಮರಿಸಿದ್ದಾರೆ. 

ಸುಶೀಲಮ್ಮ ಅವರ ಬಯಕೆಯಂತೆ ನಾರಾಯಣ ನೇತ್ರಾಲಯಕ್ಕೆ ಕಣ್ಣುಗಳನ್ನು ಹಾಗೂ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದೇಹವನ್ನು ದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.