
ಬೆಂಗಳೂರು: ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಎಸ್‌ಯುವಿ ಕಾರಿನ ಚಾಲಕ ಅಡ್ಡಾದಿಡ್ಡಿ ಚಾಲನೆ ಮಾಡಿದ್ದರಿಂದ ಬುಲೆಟ್ ಬೈಕ್ ಸಿಲುಕಿಕೊಂಡಿತ್ತು. ರಸ್ತೆ ಉದ್ದಕ್ಕೂ ಬೈಕ್ ಎಳೆದುಕೊಂಡು ಹೋಗಿದ್ದು ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕುಣಿಗಲ್‌ನ ಶ್ರೀನಿವಾಸ್ ಮದ್ಯದ ಅಮಲಿನಲ್ಲಿ ಎಸ್‌ಯುವಿ ಕಾರು ಚಲಾಯಿಸಿಕೊಂಡು ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಿದ್ದರು. ಕಾರಿನ ಮುಂದೆ ಚಲಿಸುತ್ತಿದ್ದ ಬುಲೆಟ್ ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ರೋಹಿತ್ ರಸ್ತೆಗೆ ಬಿದ್ದಿದ್ದರು. ಇತ್ತ ಬುಲೆಟ್ ಬೈಕ್ ಕಾರಿನ ಬಾನೆಟ್‌ಗೆ ಸಿಲುಕಿಕೊಂಡಿತ್ತು. ಇಷ್ಟಾದರೂ ಕಾರು ನಿಲ್ಲಿಸದೇ ಶ್ರೀನಿವಾಸ್, ಬುಲೆಟ್ ಬೈಕ್ ಅನ್ನು ಸುಮಾರು ದೂರದ ವರೆಗೆ ಎಳೆದುಕೊಂಡು ಹೋಗಿದ್ದಾರೆ. ಕಾರಿನ ಪಕ್ಕದಲ್ಲಿದ್ದ ಮತ್ತೊಂದು ಕಾರಿನವರು ಎಚ್ಚರಿಕೆ ನೀಡಿದ್ದರೂ ಕಾರು ನಿಲುಗಡೆ ಮಾಡಿರಲಿಲ್ಲ.
ನಾಯಂಡಹಳ್ಳಿ ಜಂಕ್ಷನ್ ಬಳಿ ಸಾರ್ವಜನಿಕರು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ್ದರು. ಶ್ರೀನಿವಾಸ್ಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.