ADVERTISEMENT

ಬೆಂಗಳೂರು ಕೇಂದ್ರ ವಿವಿ: ಆಫ್‌ಲೈನ್‌ನಲ್ಲೇ ಸಂಯೋಜನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 19:46 IST
Last Updated 8 ಫೆಬ್ರುವರಿ 2020, 19:46 IST

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಕಾಲೇಜುಗಳ ಸಂಯೋಜನೆ ವಿಷಯದಲ್ಲಿ ಈ ಹಿಂದೆ ಇದ್ದಂತೆ ಆಫ್‌ಲೈನ್‌ನಲ್ಲೇ ಮಾಡಲು ಸಿಂಡಿಕೇಟ್‌ ಸಭೆ ನಿರ್ಧರಿಸಿದೆ.

2019–20ನೇ ಸಾಲಿನಲ್ಲಿ ಕಾಲೇಜುಗಳು, ವಿವಿಧ ಕೋರ್ಸ್‌ಗಳು ಹಾಗೂ ಸಂಯೋಜನೆ ನವೀಕರಣವನ್ನು ಆನ್‌ಲೈನ್‌ನಲ್ಲಿ ನಡೆಸಲಾಗಿತ್ತು. ಆಗ ಬಹಳಷ್ಟು ದೋಷಗಳು ಕಂಡು ಬಂದಿದ್ದವು. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಹಿಂದಿನ ಪದ್ಧತಿಯನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT