ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಹುಣಸೆ ಮರಗಳಲ್ಲಿ ಉತ್ತಮ ಫಸಲು ಬಂದಿದ್ದು, ಇದನ್ನು ಬಹಿರಂಗ ಹರಾಜು ಹಾಕಲು ವಿಶ್ವವಿದ್ಯಾಲಯ ಮುಂದಾಗಿದೆ. ಫೆ.4ರ ಬೆಳಿಗ್ಗೆ 11ಕ್ಕೆ ಸಾರ್ವಜನಿಕ ಹರಾಜು ನಡೆಯಲಿದೆ.
ಹುಣಸೆ ಫಸಲನ್ನು ಕೊಳ್ಳಲು ಇಚ್ಛಿಸುವವರು ಹರಾಜಿಗೆ ಮುನ್ನ ₹3ಸಾವಿರ ಠೇವಣಿ ಕಟ್ಟಬೇಕು. ಭಾಗವಹಿಸುವ ಸವಾಲುದಾರರು ಕನಿಷ್ಠ ಮೂವರಿಗಿಂತ ಹೆಚ್ಚು ಜನ ಇರಬೇಕು. ಹೆಚ್ಚಿನ ಸವಾಲು ಮಾಡಿದ ಸವಾಲುದಾರರು ಸ್ಥಳದಲ್ಲಿಯೇ ಪೂರ್ಣ ಹಣ ಪಾವತಿಸಬೇಕು. ಹರಾಜನ್ನು ನಡೆಸುವ ಅಧಿಕಾರಿ ಈ ಹರಾಜನ್ನು ಪುರಸ್ಕರಿಸುವ ಇಲ್ಲವೇ ತಿರಸ್ಕರಿಸುವ ಹಕ್ಕು ಹೊಂದಿರುತ್ತಾರೆ ಎಂದು ವಿಶ್ವವಿದ್ಯಾಲಯ ಹೇಳಿದೆ.
ಮಾಹಿತಿಗೆ, ಜ್ಞಾನಭಾರತಿ ಅಗ್ನಿ ಶಾಮಕಠಾಣೆ ಎದುರು ಇರುವ ತೋಟಗಾರಿಕೆ ಅಧೀಕ್ಷಕರ ಕಚೇರಿ ‘ಸಸ್ಯಕ್ಷೇತ್ರ’
ವನ್ನು ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.