ನಗರದಲ್ಲಿ ಭಾನುವಾರ ಆಯೋಜಿಸಿದ್ದ "ಟಿ.ಸಿ.ಎಸ್ ವಿಶ್ವ 10ಕೆ ರನ್" ಓಟದಲ್ಲಿ ಭಾಗವಹಿಸಿದ್ದ ಅಥ್ಲೀಟ್ ಗಳು ವಿಧಾನ ಸೌಧ ಮುಂದೆ ಹಾದು ಹೋದಾಗ
ಪ್ರಜಾವಾಣಿ ಚಿತ್ರ/ ರಂಜು ಪಿ
ಭಾನುವಾರ ಆಗಸದಲ್ಲಿ ಸೂರ್ಯ ಉದಯಿಸುವ ಮುನ್ನವೇ ನಗರದ ಕಬ್ಬನ್ ರಸ್ತೆಯಲ್ಲಿ ಜಮಾಯಿಸಿದ್ದ ಸಹಸ್ರಾರು ಮಂದಿಯ ಮುಖದಲ್ಲಿ ಉತ್ಸಾಹದ ಚಿಲುಮೆ ಪುಟಿಯುತ್ತಿತ್ತು. ಟಿಸಿಎಸ್ ವಿಶ್ವ 10ಕೆ ಓಟಕ್ಕೆ ಬಣ್ಣಬಣ್ಣದ ಜೆರ್ಸಿ ತೊಟ್ಟು ಬಂದಿದ್ದ ಅವರು ಸಂಭ್ರಮದಲ್ಲಿ ಮಿಂದೆದ್ದರು. ಒಂದೆಡೆ ವಾತಾವರಣ ಬಿಸಿಯೇರುತ್ತಿದ್ದರೆ ಮತ್ತೊಂದೆಡೆ ಡಿ.ಜೆ ಸಂಗೀತ ಕಾವೇರಿಸಿತ್ತು. ಅಥ್ಲೀಟ್‌ಗಳೊಂದಿಗೆ ಚಿಣ್ಣರು, ವಿದ್ಯಾರ್ಥಿಗಳು, ಯುವಕ– ಯುವತಿಯರು, ವೃತ್ತಿನಿರತರು ರಸ್ತೆಯುದ್ದಕ್ಕೂ ಸಂಭ್ರಮಿಸುತ್ತಾ ಹೆಜ್ಜೆ ಹಾಕಿದರು. ಹಿರಿಯ ನಾಗರಿಕರು, ಅಂಗವಿಕಲರೂ ತಾವೇನು ಕಮ್ಮಿಯಿಲ್ಲ ಎನ್ನುವಂತೆ ಓಟದಲ್ಲಿ ಪಾಲ್ಗೊಂಡರು. ಮತ್ತೆ ಕೆಲವರು ವಿವಿಧ ವೇಷಭೂಷಣದೊಂದಿಗೆ ಬಂದು ಓಟಕ್ಕೆ ವಿಶೇಷ ಮೆರುಗು ನೀಡಿದರು.
ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ "ಟಿ.ಸಿ.ಎಸ್ ವಿಶ್ವ 10ಕೆ ಮಜಾ ರನ್" ಓಟದಲ್ಲಿ ಭಾಗವಹಿಸಿದ್ದ ಜನ
ಯುವಕನೊಬ್ಬ ಭಯೋತ್ಪಾದಕರ ದಾಳಿಯನ್ನು ಖಂಡಿಸಿದ್ದು ಹೀಗೆ
ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಟಿ.ಸಿ.ಎಸ್ ವಿಶ್ವ 10ಕೆ ಓಟ’ದಲ್ಲಿ ಸಹಸ್ರಾರು ಮಂದಿ ಭಾಗವಹಿಸಿದ್ದರು
ವ್ಹೀಲ್‌ಚೇರ್‌ನಲ್ಲಿ ಬಂದ ಮಹಿಳೆ
ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ "ಟಿ.ಸಿ.ಎಸ್ ವಿಶ್ವ 10ಕೆ ಮಜಾ ರನ್" ಓಟದಲ್ಲಿ ಭಾಗವಹಿಸಿದ್ದ ಜನ
ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದ ವೇಷಧಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.